ಬೆಳ್ಳಂ ಬೆಳಿಗ್ಗೆ ರೌಡಿಗಳ ಮನೆ ಬಾಗಿಲು ತಟ್ಟಿ ಖಡಕ್ ವಾರ್ನಿಂಗ್ ನೀಡಿದ ಪೊಲೀಸರು

ಶುಕ್ರವಾರ, 26 ಆಗಸ್ಟ್ 2022 (14:27 IST)
ಗಣೇಶ ಹಬ್ಬ, ಬಿಬಿಎಂಪಿ ಚುನಾವಣೆ ಹತ್ತಿರ ಬರ್ತಿದೆ.  ಚುನಾವಣೆ ಸಂದರ್ಭ ಸಮೀಪಿಸುತ್ತಿದ್ದಂತೆ ಬೆಂಗಳೂರು ರೌಡಿಗಳು ಬಾಲ ಬಿಚ್ಚೋದು ಕಾಮನ್. ಹೀಗಾಗಿ ಬೆಂಗಳೂರು ಪೋಲೀಸ್ರು ರೌಡಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ‌. ಸದ್ಯ ಬೆಂಗಳೂರು ಉತ್ತರ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ರೌಡಿಗಳ ಮನೆ ಬಾಗಿಲು ತಟ್ಟಿ ಶಾಕ್ ಕೊಟ್ಟಿದ್ದಾರೆ.
 
ಹೌದು,ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್,ಪೀಣ್ಯಾ ಸೇರಿದಂತೆ ಉತ್ತರ ವಿಭಾಗದ ಎಲ್ಲಾ ಠಾಣಾ ವ್ಯಾಪ್ತಿಯ ರೌಡಿಗಳ ಮನೆ ಮೇಲೆ ಇಂದು ಬೆಳ್ಳಂ ಬೆಳಗ್ಗೆ ಪೊಲೀಸರು ದಾಳಿ ಮಾಡಿದ್ದಾರೆ.  ಮುಂಜಾನೆ ನಾಲ್ಕು ಗಂಟೆಗೆ ರೌಡಿಗಳ  ಮನೆ ಬಾಗಿಲು ತಟ್ಟಿದ ಪೊಲೀಸರು ನಿದ್ದೆಗಣ್ಣಿನಲ್ಲಿದ್ದ ರೌಡಿಗಳಿಗೆ ಶಾಕ್ ನೀಡಿದ್ದಾರೆ.
 
ಹಬ್ಬ ಚುನಾವಣೆ ಸಂದರ್ಭ ಬಾಲ ಬಿಚ್ಚದಂತೆ ಖಡಕ್ ವಾರ್ನಿಂಗ್ ಮಾಡಿದ್ದಾರೆ. ಅಪರಾಧ ಚಟುವಟಿಕೆಯಲ್ಲಿ ಇನ್ವಾಲ್ ಆದರೆ ಬಾಲ ಕಟ್ ಮಾಡುವುದಾಗಿ ಎಚ್ಚರಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ