ಕೇರಳದ ಮುಂದೆ ಸೋತ ಕರ್ನಾಟಕ: ಕೆಎಸ್ ಆರ್ ಟಿಸಿ ಲೋಗೋ ಹಕ್ಕು ರಾಜ್ಯಕ್ಕಿಲ್ಲ

ಗುರುವಾರ, 3 ಜೂನ್ 2021 (09:44 IST)
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇನ್ನು ಮುಂದೆ ಕೆಎಸ್ ಆರ್ ಟಿಸಿ ಎಂದು ಲೋಗೋ ಹಾಕಿಕೊಳ್ಳುವಂತಿಲ್ಲ! ಈ ಕುರಿತು ಕಾನೂನು ಹೋರಾಟದಲ್ಲಿ ಕೇರಳದ ವಿರುದ್ಧ ಕರ್ನಾಟಕಕ್ಕೆ ಸೋಲಾಗಿದೆ.

 

ಎರಡೂ ರಾಜ್ಯಗಳ ರಸ್ತೆ ಸಾರಿಗೆ ನಿಗಮ ಇದುವರೆಗೆ ಕೆಎಸ್ ಆರ್ ಟಿಸಿ ಎಂಬ ಲೋಗೋ ಬಳಸುತ್ತಿತ್ತು. ಆದರೆ 2014 ರಲ್ಲಿ ಕೇರಳ ತಗಾದೆ ತೆಗೆದಿದ್ದು, ಈ ಲೋಗೋ ಬಳಸಬಾರದು ಎಂದು ಕರ್ನಾಟಕದ ವಿರುದ್ಧ ಕಾನೂನು ಹೋರಾಟಕ್ಕಿಳಿದಿತ್ತು.

ಸುದೀರ್ಘ 8 ವರ್ಷಗಳ ಕಾನೂನು ಹೋರಾಟದ ಬಳಿಕ ಇದೀಗ ಟ್ರೇಡ್ ಮಾರ್ಕ್ ರಿಜಿಸ್ಟ್ರಾರ್ ಕೆಎಸ್ ಆರ್ ಟಿಸಿ ಲೋಗೋ ಕೇರಳದ ಹಕ್ಕು ಎಂದು ತೀರ್ಪು ನೀಡಿದೆ. ಆದರೆ ಈ ಬಗ್ಗೆ ನಮಗೆ ಇನ್ನೂ ತೀರ್ಪಿನ ಪ್ರತಿ ಬಂದಿಲ್ಲ. ಬಂದ ಬಳಿಕ ಮುಂದಿನ ಕ್ರಮ ಹೋರಾಟ ಕೈಗೊಳ್ಳುವುದಾಗಿ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ಶಿವಯೋಗಿ ಕಳಸದ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ