ಗೂಗಲ್‌ ಮ್ಯಾಪ್‌ ಎಡವಟ್ಟು: ರಸ್ತೆಬಿಟ್ಟು ನೀರಿಗಿಳಿದ ಕಾರು, ನಾಲ್ವರ ರಕ್ಷಣೆ

sampriya

ಶನಿವಾರ, 25 ಮೇ 2024 (18:19 IST)
Photo By X
ಕೊಟ್ಟಾಯಂ: ಗೊತ್ತಿಲ್ಲದ ಸ್ಥಳಕ್ಕೆ ಏನಾದರೂ ಪ್ರಯಾಣಿಸಬೇಕಾದರೆ ಇಂದು ಗೂಗಲ್‌ ಮ್ಯಾಪ್ ನೋಡಿಕೊಂಡು ಪ್ರಯಾಣಿಸುವುದು ಸಾಮಾನ್ಯ. ಇಂದು ಪ್ರತಿಯೊಬ್ಬರು ಗೂಗಲ್‌ ಸಹಾಯದಿಂದಲೇ ತನ್ನ ಸ್ಥಳವನ್ನು ತಲುಪುತ್ತಾರೆ. ಆದರೆ ಇಲ್ಲೊಬ್ಬರು ಗೂಗಲ್‌ ಮ್ಯಾಪ್‌ ತೋರಿಸಿದ ಮಾರ್ಗದಲ್ಲಿ ಹೋಗಿ ಅವರ ಕಾರು ರಸ್ತೆಯನ್ನು ಬಿಟ್ಟು ನೀರಿಗಿಳಿಸಿದೆ.

ಕೇರಳದ ಕೊಟ್ಟಾಯಂ ಜಿಲ್ಲೆಯ ಕುರುಪಂಥರಾ ಪ್ರದೇಶದಲ್ಲಿ ಶನಿವಾರ ಬೆಳಗಿನ 03 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆಂಧ್ರಪ್ರದೇಶ ಮೂಲದ ನಾಲ್ವರು ಪ್ರವಾಸಿಗರನ್ನು ಪೊಲೀಸರು ರಕ್ಷಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿದ ಕೊಟ್ಟಾಯಂ ವಿಭಾಗದ ಪೊಲೀಸ್‌ ಅಧಿಕಾರಿ, ಗೂಗಲ್‌ ಮ್ಯಾಪ್‌ ನೋಡಿಕೊಂಡ ಬಂದ ಪ್ರವಾಸಿಗರಿಗೆ ರಸ್ತೆಯನ್ನು ಬಿಟ್ಟು ನೀರಿಗೆ ಇಳಿದಿದೆ. ಕೂಡಲೇ ಕಾರಿನಲ್ಲಿದ್ದವರನ್ನು ಮೇಲಕ್ಕೆತ್ತಿ ರಕ್ಷಿಸಲಾಗಿದೆ. ಇದರಲ್ಲಿದ್ದ ಮೂವರು ಪುರುಷರು ಹಾಗೂ ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ.

ಕಾರು ನೀರಿನಲ್ಲಿ ಸಂಫೂರ್ಣವಾಗಿ ಮುಳುಗಿದ್ದು, ಹೊರತೆಗೆಯಲಾಗುತ್ತಿದೆ ಎಂದು ಕೊಟ್ಟಾಯಂ ವಿಭಾಗದ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ