ಕೊರೊನಾ ನಂತರ ಆರ್ಥಿಕ ಚಟುವಟಿಕೆಗಳಿಗೆ ಸರ್ಕಾರ ಅನುಮತಿ

ಭಾನುವಾರ, 3 ಅಕ್ಟೋಬರ್ 2021 (16:10 IST)
ಕೊರೊನಾ ನಂತರ ಆರ್ಥಿಕ ಚಟುವಟಿಕೆಗಳಿಗೆ ಸರ್ಕಾರ ಈಗ ಅನುಮತಿ ನೀಡುತ್ತಿದೆ. ಹೀಗಾಗಿ ನಾಳೆಯಿಂದ ಪಬ್​ಗಳು ಸಹ ಪೂರ್ಣ ಪ್ರಮಾಣದಲ್ಲಿ ತೆರೆಯುತ್ತಿವೆ. ಈ ಹಿನ್ನೆಲೆ ಪಬ್​ ಮಾಲೀಕರು ಹಾಗೂ ಸಿಬ್ಬಂದಿ ಬೆಂಗಳೂರಲ್ಲಿ ಸಕಲ ಸಿದ್ದತೆ ನಡೆಸುತ್ತಿದ್ದಾರೆ. ಜನ ಸಹ ಕೊರೊನಾದಿಂದ  ಹೊರ ಬಂದು ಮೈಂಡ್​ ರಿಲೀಫ್​ ಮಾಡಿಕೊಳ್ಳಲು ಸಿದ್ದರಾಗಿದ್ದಾರೆ. ಆದ್ರೆ ಪಬ್​ಗಳಲ್ಲಿ ಜನ ಯಾವ ರೀತಿ ಕೊರೊನಾ ನಿಯಮಗಳನ್ನು ಪಾಲನೆ ಮಾಡ್ತಾರೆ ಅನ್ನೊದು ಯಕ್ಷ ಪ್ರಶ್ನೆಯಾಗಿ ಕಾಡುತ್ತದೆ. ಸರ್ಕಾರ ಅವಕಾಶ ಕೊಟ್ಟಿದೆ ಅಂತಾ ಜನ ಸಹ ಬೇಕಾಬಿಟ್ಟಿಯಾಗಿ ಓಡಾಡದೇ ಸರ್ಕಾರ ಸಹ ಪಬ್​ಗಳ ಮೇಲೆ ಒಂದು ಕಣ್ಣಿಟ್ಟರೆ ಓಳಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ