ಪರಿಷತ್‌ಗೆ ಸಿಎಂ ಲಿಂಗಪ್ಪ ನಾಮಕರಣಕ್ಕೆ ರಾಜ್ಯಪಾಲರ ನಕಾರ

ಬುಧವಾರ, 17 ಮೇ 2017 (20:18 IST)
ಪರಿಷತ್‌ಗೆ ಸಿಎಂ ಲಿಂಗಪ್ಪ ನಾಮನಿರ್ದೇಶನಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ತಿರಸ್ಕರಿಸಿದ್ದಾರೆ ಎನ್ನುವ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಆ ಬಗ್ಗೆ ನನಗೆ ಗೊತ್ತಿಲ್ಲ ನೋಡಿ ಹೇಳ್ತೇನೆ ಎಂದು ಹೇಳಿದ್ದಾರೆ.
 
ಪರಿಷತ್‌ಗೆ ಮೂವರು ಸದಸ್ಯರ ನಾಮನಿರ್ದೇಶನ  ಮಾಡಬೇಕಾಗಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಮೋಹನ್ ಕೊಂಡಜ್ಜಿ, ಪಿ.ಆರ್.ರಮೇಶ್ ಮತ್ತು ಸಿ.ಎಂ.ಲಿಂಗಪ್ಪ ಹೆಸರುಗಳನ್ನು ಅಂತಿಮಗೊಳಿಸಿ ರಾಜ್ಯಪಾಲರ ಅನುಮತಿಗಾಗಿ ಕಳುಹಿಸಿಕೊಟ್ಟಿತ್ತು.
 
ಆದರೆ, ರಾಜ್ಯಪಾಲರು ಇಬ್ಬರ ಹೆಸರಿಗೆ ಒಪ್ಪಿಗೆ ನೀಡಿದ್ದು, ಶಿಕ್ಷಣ, ಸಮಾಜ ಸೇವೆ ಕೋಟಾದಲ್ಲಿ ಸಿ.ಎಂ. ಲಿಂಗಪ್ಪ ಹೆಸರು ಬರುವುದಿಲ್ಲವೆಂದು ಆಕ್ಷೇಪಿಸಿದ್ದಾರೆ. ಸಕ್ರಿಯ ರಾಜಕೀಯದಲ್ಲಿರುವ ವ್ಯಕ್ತಿಯನ್ನು ಸಾಮಾಜಿಕ ಸೇವೆ ವ್ಯಾಪ್ತಿಗೆ ತರಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ರಾಜ್ಯಪಾಲರ ಕಚೇರಿ ಕಾರಣ ನೀಡಿದೆ.
 
ರಾಜ್ಯಪಾಲರನ್ನು ಭೇಟಿಯಾಗಿ ಸಿ.ಎಂ.ಲಿಂಗಪ್ಪ ಅವರ ಬಗ್ಗೆ ಚರ್ಚೆ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ