ಅಧಿವೇಶದ ಉದ್ದೇಶಿಸಿ ರಾಜ್ಯಪಾಲರ ಭಾಷಣ
ವಿಧಾನಮಂಡಲ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದ್ದಾರೆ. ಪಂಪಾ, ಕುವೆಂಪು, ಬಸವಣ್ಣರನ್ನ ಸ್ಮರಿಸಿದ್ದಾರೆ. ನನ್ನ ಸರ್ಕಾರ ಜನಪರ ಆಡಳಿತ ನೀಡುತ್ತದೆ.. ಜಾತಿ, ಧರ್ಮ ಎನ್ನದೆ ಜನಪರ ಆಡಳಿತ ನೀಡುತ್ತಿದೆ.. ನಮ್ಮ ಸರ್ಕಾರವು ನುಡಿದಂತೆ ನಡೆದು, ಕರ್ನಾಟಕವನ್ನ ಆರ್ಥಿಕವಾಗಿ ಸದೃಢ ಮಾಡಲು ಸಿದ್ಧವಾಗಿದೆ ಎಂದರು.. 34 ವರ್ಷಗಳಲ್ಲಿ ಯಾರಿಗೂ ಸಿಗದ ಬಹುಮತ ಕಾಂಗ್ರೆಸ್ ಸರ್ಕಾರಕ್ಕೆ ಸಿಕ್ಕಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.. ಇನ್ನು ಸರ್ಕಾರ ಯೋಜನೆಗಳ ವಿಚಾರವಾಗಿ ರಾಜ್ಯಪಾಲರು ಪ್ರಸ್ತಾಪಿಸಿದರು, ಸರ್ಕಾರ ಹೇಳಿದಂತೆ ಗ್ಯಾರಂಟಿಗಳನ್ನು ಈಡೇರಿಸುತ್ತಿದೆ.. ಇಂದಿರಾ ಕ್ಯಾಂಟೀನ್, ಪಂಚ ಗ್ಯಾರಂಟಿಗಳು ಜನರಿಗೆ ವರದಾನವಾಗಿದೆ.. ಸರ್ಕಾರ ಬಡವರು, ಆರ್ಥಿಕ ಹಿಂದುಳಿದವರ ಪರವಾಗಿ ನಿಲ್ಲುತ್ತದೆ ಎಂದರು.