ಶ್ರವಣಬೆಳಗೊಳದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಡ್ಯಾನ್ಸ್

ಶುಕ್ರವಾರ, 7 ಜುಲೈ 2017 (13:21 IST)
ಸಾಂಸ್ಕ್ರತಿಕ ಕಾರ್ಯಕ್ರಮವೊಂದರಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಡಾನ್ಸ್ ಮಾಡಿ ಕಾರ್ಯಕ್ರಮಕ್ಕೆ ಮೆರಗು ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಚಾತುರ್ಮಾಸ ಕಳಸ ಪ್ರತಿಷ್ಠಾನ ಸಮಾರಂಭದ ನಿಮಿತ್ಯ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಜುಭಾಯಿ ವಾಲಾ ಪಾಲ್ಗೊಂಡು, ಇಂತಹ ಕಾರ್ಯಕ್ರಮಗಳು ಜನರಿಗೆ ಸಂತಸ ತರುತ್ತವೆ ಎಂದರು.
 
ಗುಜರಾತಿನ ಗಾರ್ಭಾ ನೃತ್ಯ ಕಾರ್ಯಕ್ರಮದಲ್ಲಿ ತಂಡದ ಇತರ ಕಲಾವಿದರೊಂದಿಗೆ ಹೆಜ್ಜೆ ಹಾಕಿದ ರಾಜ್ಯಪಾಲರು ತಮ್ಮ ನೃತ್ಯ ನೈಪುಣ್ಯತೆಯನ್ನು ಮೆರೆದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ