ಮತ್ತೆ 1 ರಿಂದ 5 ರವರೆಗಿನ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್

ಸೋಮವಾರ, 29 ಜೂನ್ 2020 (09:34 IST)
ಬೆಂಗಳೂರು: ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಇತ್ತೀಚೆಗೆ 1 ರಿಂದ 5 ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡದಂತೆ ಶಾಲೆಗಳಿಗೆ ಸೂಚನೆ ನೀಡಿತ್ತು. ಆದರೆ ಈಗ ಮತ್ತೆ ಆನ್ ಲೈನ್ ಕ್ಲಾಸ್ ಶುರು ಮಾಡಲು ಹೊಸ ಮಾರ್ಗ ಸೂಚಿ ನೀಡಿದೆ.


ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮತ್ತು ರಾಜ್ಯ ಹೈಕೋರ್ಟ್ ಸಲಹೆ ಮೇರೆಗೆ ಹೊಸ ನಿಯಮಾವಳಿಗಳೊಂದಿಗೆ ಆನ್ ಲೈನ್ ತರಗತಿ ಶುರು ಮಾಡಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ವಾರದಲ್ಲಿ ಗರಿಷ್ಠ ಮೂರು ದಿನ ಮಾತ್ರ 45 ನಿಮಿಷಗಳ ತರಗತಿ ನಡೆಸಬಹುದಾಗಿದೆ. ದಿನ ಬಿಟ್ಟು ದಿನ ಎರಡು ಅವಧಿಯ ತರಗತಿ ನಡೆಸಬಹುದು. ಆದರೆ ಎಲ್ ಕೆಜಿ, ಯುಕೆಜಿ ತರಗತಿಯವರಿಗೆ ಅಗತ್ಯವಿದ್ದರೆ ಮಾತ್ರ ವಾರಕ್ಕೊಮ್ಮೆ 30 ನಿಮಿಷ ಪಾಲಕರೊಂದಿಗೆ ಸಂವಾದ ನಡೆಸಬಹುದಾಗಿದೆ. ಆದರೆ ಆನ್ ಲೈನ್ ಶಿಕ್ಷಣಕ್ಕೆ ಪ್ರತ್ಯೇಕ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಹೊಸ ನಿಯಮದಲ್ಲಿ ಸೂಚಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ