ಸರ್ಕಾರಿ ಕಚೇರಿಗಳಿಂದ ಕೋಟಿ ಕೋಟಿ ಕರೆಂಟ್ ಬಿಲ್ ಬಾಕಿ

ಬುಧವಾರ, 6 ಏಪ್ರಿಲ್ 2022 (14:52 IST)
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳು 5191 ಕೋಟಿ ರೂ. ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿವೆ. ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪೆನಿಗಳಿಂದಲೂ ಉಭಯ ಸರ್ಕಾರಗಳ ವಿವಿಧ ಇಲಾಖೆಗಳು ಬಾಕಿ ಉಳಿಸಿಕೊಂಡಿವೆ.
ಜನವರಿ ಅಂತ್ಯದವರೆಗೂ ರಾಜ್ಯ ಸರ್ಕಾರದ ಇಲಾಖೆಗಳು 5144 ಕೋಟಿ ರೂ. ನಷ್ಟು ಬಾಕಿ ಉಳಿಸಿಕೊಂಡಿದ್ದರೆ, ಕೇಂದ್ರ ಸರ್ಕಾರದ ಇಲಾಖೆಗಳು 46 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ.
 
ಅದರಲ್ಲೂ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿರುವುದು ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಇಲಾಖೆಯ ಕುಡಿಯುವ ನೀರು
ಹಾಗೂ ಬೀದಿ ದೀಪದ ವಿದ್ಯುತ್ ಶುಲ್ಕ, ಬೆಂಗಳೂರು ಜಲ ಮಂಡಳಿ, ಜಲ ಸಂಪನ್ಮೂಲ ಇಲಾಖೆಯೂ ಅತಿ ಹೆಚ್ಚು ವಿದ್ಯುತ್ ಶುಲ್ಕದ ಬಾಕಿ ಉಳಿಸಿಕೊಂಡಿವೆ.
 
ಕೇಂದ್ರ ಸರ್ಕಾರದ ಬಂಗಾರಪೇಟೆ ಚಿನ್ನದ ಗಣಿ 25 ಕೋಟಿಗೂ ಹೆಚ್ಚು ಬಾಕಿ ಪಾವತಿಸಬೇಕಿದೆ. ಬಿಎಸ್‍ಎನ್‍ಎಲ್ ನಂತರದ ಸ್ಥಾನದಲ್ಲಿದೆ.
ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳು 2021-22ನೇ ಸಾಲಿನಲ್ಲಿ ವಿದ್ಯುತ್ ಖರೀದಿ ಮಾಡಿಲ್ಲ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಬೇಡಿಕೆಗಿಂತ ಹೆಚ್ಚಾಗಿದ್ದು, ಸ್ವಾವಲಂಬನೆ ಸಾಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ