ಮೂರನೇ ಅಲೆ ತಡೆಯಲು ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸಲು ಸಿದ್ಧತೆ ಶುರು

ಬುಧವಾರ, 7 ಜುಲೈ 2021 (11:42 IST)
ಬೆಂಗಳೂರು: ಕೊರೋನಾ ಮೂರನೇ ಅಲೆ ತಡೆಯಲು ರಾಜ್ಯ ಸರ್ಕಾರ ಈಗಿನಿಂದಲೇ ತಯಾರಿ ನಡೆಸಲು ಆರಂಭಿಸಿದೆ.

 
ಮೂರನೇ ಅಲೆ ಮಕ್ಕಳ ಮೇಲೆ ಅದರಲ್ಲೂ ಪೌಷ್ಠಿಕತೆಯ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ವರದಿ ಬೆನ್ನಲ್ಲೇ ತಜ್ಞರ ಸಮಿತಿ ಅಪೌಷ್ಠಿಕತೆ ನಿವಾರಿಸಲು ಈ ವಾರವೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಈ ವರದಿಯನ್ವಯ ಸರ್ಕಾರ ಮಕ್ಕಳ ಅಪೌಷ್ಠಿಕತೆ ನಿವಾರಿಸಲು ಕ್ರಮ ಕೈಗೊಳ್ಳಲಿದೆ. ಅಪೌಷ್ಠಿಕತೆ ನಿವಾರಿಸಲು ಅಂಗನವಾಡಿ ಮಕ್ಕಳಿಗೆ ಮೊಟ್ಟೆ, ಹಾಲು ಒದಗಿಸಲಾಗುತ್ತಿದೆ. ಮೂರನೇ ಅಲೆ ತಡೆಯಲು ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸಲು ವ್ಯವಸ್ಥೆ ಮಾಡುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ