ಬಿಬಿಎಂಪಿ ಆಯ್ತು, ಇದೀಗ ಪೊಲೀಸ್ ಕಮೀಷನರೇಟ್‌ ವಿಭಜನೆಗೆ ಮುಂದಾದ ಸರಕಾರ

ಬುಧವಾರ, 26 ಅಕ್ಟೋಬರ್ 2016 (11:33 IST)
ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆಗೆ ಮುಂದಾಗಿದ್ದ ರಾಜ್ಯ ಸರಕಾರ, ಇದೀಗ ನಗರ ಪೊಲೀಸ್ ಕಮೀಷನರೇಟ್‌ನ್ನು ವಿಭಜಿಸಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. 
 
ನಗರದ ವ್ಯಾಪ್ತಿ ಹೆಚ್ಚಾಗಿರುವುದರ ಜೊತೆಗೆ ಜನಸಂಖ್ಯೆ ಪ್ರಮಾಣ ಸಹ ಅಧಿಕವಾಗಿತ್ತಿದೆ. ಇದರಿಂದ ನಗರದಲ್ಲಿ ಅಪರಾಧ ಚಟುವಟಿಕೆಗಳ ಪ್ರಮಾಣ ಹೆಚ್ಚಳವಾಗಿದ್ದು, ಕಾನೂನು ಸುವ್ಯವಸ್ಥೆ ಸವಾಲಾಗಿ ಮರಿಣಮಿಸುತ್ತಿದೆ. ಹೀಗಾಗಿ ಸರಕಾರ ಪೊಲೀಸ್ ಕಮೀಷನರೇಟ್ ವಿಭಜನೆಗೆ ರಾಜ್ಯ ಸರಕಾರ ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. 
 
ಒಬ್ಬರೇ ಪೊಲೀಸ್ ಆಯುಕ್ತರಿಂದ ನಗರದ ಸುಮಾರು ಒಂದು ಕೋಟಿ ಜನರಿಗೆ ರಕ್ಷಣೆ ಒದಗಿಸುವುದು ಸಾಧ್ಯವಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ಪೂರ್ವ ಹಾಗೂ ಪಶ್ಚಿಮ ಇಲ್ಲವೇ ನಗರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಹೊರವಲಯದ ಕೆಲವು ಪೊಲೀಸ್ ಠಾಣೆಗಳನ್ನು ನಗರ ವ್ಯಾಪ್ತಿಗೆ ಸೇರಿಸಿಕೊಂಡು ಕಮೀಷನರೇಟ್‌ ವಿಭಜನೆ ಮಾಡಲು ಉದ್ದೇಶಿಸಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ