ಸಿಎಂ ಅನಿಲ ಭಾಗ್ಯ ಯೋಜನೆಗೆ ಸರಕಾರ ಅಸ್ತು: ಸಚಿವ ಖಾದರ್

ಶುಕ್ರವಾರ, 16 ಜೂನ್ 2017 (17:36 IST)
ರಾಜ್ಯದಲ್ಲಿ ಇನ್ನೂ 21 ಲಕ್ಷ ಕುಟುಂಬಗಳಿಗೆ ಗ್ಯಾಸ್ ಸಂಪರ್ಕವಿಲ್ಲ. ಸಿಎಂ ಅನಿಲ ಭಾಗ್ಯ ಯೋಜನೆ ಜಾರಿಯಿಂದ ಪ್ರತಿಯೊಬ್ಬರಿಗೆ ಗ್ಯಾಸ್ ಸಂಪರ್ಕ ದೊರೆತಂತಾಗುತ್ತದೆ ಎಂದು ಆಹಾರ ಸರಬರಾಜು ಖಾತೆ ಸಚಿವ ಯು.
ಟಿ.ಖಾದರ್ ಹೇಳಿದ್ದಾರೆ.
 
ಬಿಪಿಎಲ್ ಕುಟುಂಬಗಳು ಯೋಜನೆಯ ಲಾಭವನ್ನು ಪಡೆಯಲು ಅರ್ಹವಾಗಿದ್ದ, ಅನಿಲ ಸಿಲಿಂಡರ್, ಸ್ಟವ್,  ಟ್ಯೂಬ್, ರೆಗ್ಯೂಲೆಟರ್, ಕನೆಕ್ಟರ್‌ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
 
ಪುನರ್‌ಬೆಳಕು ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಎರಡು ರಿಚಾರ್ಜೇಬಲ್ ಬಲ್ಬ್‌ಗಳನ್ನು ನೀಡಲಾಗುತ್ತದೆ. ಇಲಾಖೆಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
 
ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ನೀಡಲು ನಿರ್ಧರಿಸಲಾಗಿದೆ. ಒಂದು ವೇಳೆ ಸೀಮೆ ಎಣ್ಣೆ ಬೇಡ ಎಂದಾದಲ್ಲಿ ಎರಡು ಎಲ್‌ಇಡಿ ಬಲ್ಡ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ