ಗೌರಿ ಲಂಕೇಶ್ ಹತ್ಯೆ: ಸಿಸಿಟಿವಿಯಲ್ಲಿ ದಾಖಲಾಗಿದ್ದು ಏನು?

ಬುಧವಾರ, 6 ಸೆಪ್ಟಂಬರ್ 2017 (08:14 IST)
ಬೆಂಗಳೂರು: ಪ್ರತಿಷ್ಠಿತ ಆರ್ ಆರ್ ನಗರದಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆ ಬೆಚ್ಚಿಬೀಳಿಸುವಂತೆ ಮಾಡಿದೆ. ಗೌರಿ ಲಂಕೇಶ್ ಹತ್ಯೆಯಾಗಿದ್ದು ಹೇಗೆ ಎಂಬುದು ಅವರ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.

 
ಇದನ್ನು ಪೊಲೀಸರು ಇದೀಗ ವಶಕ್ಕೆ ಪಡೆದಿದ್ದು, ದುಷ್ಕರ್ಮಿಗಳ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ. ಅವರ ಚಹರೆಯನ್ನು ಅಂದಾಜಿಸಿ ರೇಖಾಚಿತ್ರ ಬರೆಯುವ ಕೆಲಸವೂ ನಡೆಯುತ್ತಿದೆ ಎನ್ನಲಾಗಿದೆ. ಅಲ್ಲದೆ ಸಿಸಿಟಿವಿ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಲಿದ್ದು, ಒಂದು ಮೂಲಗಳ ಪ್ರಕಾರ ದುಷ್ಕರ್ಮಿಗಳು ಬಳಸಿದ್ದ ಬೈಕ್  ನಂಬರ್ ಕೂಡಾ ಇದರಿಂದಾಗಿ ತಿಳಿದು ಬಂದಿದೆ ಎನ್ನಲಾಗಿದೆ.

ಮನೆಯ ಬಳಿ ಕಾರು ನಿಲ್ಲಿಸಿದ ಗೌರಿ ಲಂಕೇಶ್, ಗೇಟು ತೆರೆದು ಒಳ ಪ್ರವೇಶಿಸುವಾಗ ಅಲ್ಲೇ ಇದ್ದ ದುಷ್ಕರ್ಮಿ ಹಿಂಬಾಲಿಸಿಕೊಂಡು ಬಂದ ಹತ್ತಿರದಿಂದಲೇ ಗುಂಡಿನ ದಾಳಿ ನಡೆಸಿದ್ದ. ತಕ್ಷಣ ಪ್ರಾಣ ಉಳಿಸಿಕೊಳ್ಳಲು ಮನೆಯ ಒಳಗೆ ಓಡಲು ಯತ್ನಿಸಿದ ಗೌರಿ ಲಂಕೇಶ್ ಬಾಗಿಲ ಬಳಿ ಬರುವಷ್ಟರಲ್ಲಿ ಮೂರು ಗುಂಡು ತಗುಲಿ ಕುಸಿದು ಬೀಳುತ್ತಾರೆ.

ಗೌರಿ ಲಂಕೇಶ್ ಕುಸಿದು ಬಿದ್ದಿದ್ದನ್ನು ನೋಡಿ ಹೆಲ್ಮೆಟ್ ಧರಿಸಿದ್ದ ಹಂತಕರು ಪರಾರಿಯಾಗುತ್ತಾರೆ. ಒಟ್ಟು ಮೂವರು ಹಂತಕರು ಅಲ್ಲಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. ಘಟನೆಯನ್ನು ಎದುರು ಮನೆಯವರು ಕಣ್ಣಾರೆ ಕಂಡಿದ್ದು, ಗಾಬರಿಗೊಂಡು ಪೊಲೀಸರಿಗೆ ಮತ್ತು ಆಂಬ್ಯುಲೆನ್ಸ್ ಗೆ ಫೋನ್ ಮಾಡಿದರೆಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ