ತಬ್ಲಿಘಿಗಳನ್ನು ಹಿಡಿದು ಜೈಲಿಗೆ ಕಳಿಸಿ ಎಂದ ಸರಕಾರ

ಶನಿವಾರ, 11 ಏಪ್ರಿಲ್ 2020 (17:05 IST)
ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿರುವ ನಡುವೆಯೇ ಕೈಗೆ ಸಿಗದಂತೆ ಓಡಾಡುತ್ತಿರುವ ತಬ್ಲಿಘಿಗಳನ್ನು ಹಿಡಿದು ಜೈಲಿಗೆ ಕಳಿಸಿ ಎಂದು ಸರಕಾರ ಹೇಳಿದೆ.

ದೆಹಲಿಯಲ್ಲಿ ನಡೆದಿದ್ದ ನಿಜಾಮುದ್ದೀನ್ ಜಮಾತ್ ಸಭೆಯಲ್ಲಿ ಪಾಲ್ಗೊಂಡು ಬಂದ ಜನರು ಕೆಲವರು ಕೈಗೆ ಸಿಗದೇ ಓಡಾಡುತ್ತಿದ್ದಾರೆ. ಜನರಲ್ಲಿ ಭೀತಿ ಶುರುವಾಗಿದೆ. ಹೀಗಾಗಿ ಪೊಲೀಸರ ಕೈಗೆ ಸಿಕ್ಕ ತಕ್ಷಣ ಅಂಥವರನ್ನು ಜೈಲಿಗೆ ಕಳಿಸಿ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಡಿಸಿಎಂ ಗೋವಿಂದ ಕಾರಜೋಳ, ತಬ್ಲಿಘಿಗಳ ವಿರುದ್ಧ ಹರಿಹಾಯ್ದರು. ಇನ್ನು, ಲಾಕ್ ಡೌನ್ ನನ್ನು ಜನರು ಗಂಭೀರವಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ