ಸೆಂಟ್ರಲ್ ಜೈಲ್ ಕೈದಿಗಳು ಮಾಡಿದ್ರು ಮಹಾನ್ ಕಾರ್ಯ: ಏನದು? ನೀವು ಮೆಚ್ಚಿಕೊಳ್ತೀರಾ

ಗುರುವಾರ, 22 ಆಗಸ್ಟ್ 2019 (19:34 IST)
ಕೇಂದ್ರ ಕಾರಾಗೃಹದಲ್ಲಿ ಮಾನವೀಯತೆ ಮೆರೆದ ಕೈದಿಗಳ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನೆರೆ ಸಂತ್ರಸ್ತರಿಗಾಗಿ ಬಾಡೂಟ ತ್ಯಜಿಸಿರೋ ಕೈದಿಗಳು 10 ಲಕ್ಷ ರೂ. ದೇಣಿಗೆಗೆ ನಿರ್ಧಾರ ಮಾಡಿದ್ದಾರೆ.

 ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಲಕ್ಷಾಂತರ ಜನರಿಗೆ ರಾಜ್ಯದ ಮೂಲೆಮೂಲೆಯಿಂದ ಜನರು ನೆರವಿನ ಹಸ್ತ ಚಾಚುತ್ತಿದ್ದಾರೆ. ಈಗ ಜೈಲಿನಲ್ಲಿರುವ ಕೈದಿಗಳೂ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದಾರೆ. 10 ಲಕ್ಷ ರೂ.ಗಳನ್ನು ಸಿಎಂ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ.

ಬೆಂಗಳೂರು ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಕೈದಿಗಳು ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ಎದುರಾಗಿದ್ದ ಕುರಿತು ವರದಿ ನೋಡಿದ್ದು, ಪ್ರವಾಹದಿಂದಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿರುವುದನ್ನು ತಿಳಿದಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರತಿ ಶುಕ್ರವಾರ ಮಾಂಸಾಹಾರ ನೀಡಲಾಗುತ್ತಿದ್ದು , ಅದರಲ್ಲಿ ನಾಲ್ಕು ವಾರಗಳ ಮಾಂಸದ ಊಟವನ್ನು ಸೇವಿಸದೆ ಮಾಂಸಾಹಾರಕ್ಕಾಗಿ ಖರ್ಚಾಗುವ ಸುಮಾರು 10 ಲಕ್ಷ ರೂ. ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರಬರೆದು ಕೋರಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ