ಸಿಸಿಬಿ ಮಾದಕ ವಸ್ತು ನಿಗ್ರಹ ದಳದಿಂದ‌ ಭರ್ಜರಿ ಕಾರ್ಯಚರಣೆ

geetha

ಮಂಗಳವಾರ, 30 ಜನವರಿ 2024 (14:20 IST)
ಬೆಂಗಳೂರು-ಅಕ್ರಮವಾಗಿ ಈ ಸಿಗರೇಟ್ ಮಾರಟ ಮಾಡುತ್ತಿದ್ದ ಆರೋಪಿಯನ್ನ ಖಚಿತ ಮಾಹಿತಿ ಮೇರಗೆ ದಾಳಿ ನಡೆಸಿ ಬಂಧನ ಮಾಡಲಾಗಿದೆ.3 ಕೋಟಿಗೂ ಅಧಿಕ ಮೌಲ್ಯದ ನಿಷೇಧಿತ ಈ ಸಿಗರೇಟ್ ವಶಕ್ಕೆ ಪಡೆದಿದ್ದು, ಶೋಯೇಬ್ ಎಂಬಾತನನ್ನ ಬಂಧನ ಮಾಡಲಾಗಿದೆ.
 
ಬ್ಲೂ ಡಾರ್ಟ್ ಮುಖಾಂತರ ಕೊರೀಯರ್ ಆರೋಪಿ ತರಿಸಿಕೊಳ್ಳುತ್ತಿದ್ದ .ದುಬಾಯಿಯಿಂದ,ಡೆಲ್ಲಿ,ಡೆಲ್ಲಿಯಿಂದ ರಾಜಧಾನಿಗೆ ಆರೋಪಿ ತರಿಸಿಕೊಳ್ಳುತ್ತಿದ್ದ.ಮಾರಟಕ್ಕೆ ಒಟ್ಟು 6 ಸಾವಿರ ಈ ಸಿಗರೇಟ್ ಆರೋಪಿ ತರಿಸಿಕೊಂಡಿದ್ದ.ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಬಿಟಿಎಂನಲ್ಲಿ ಶೊಯೇಬ್ ಮನೆ ಮಾಡಿಕೊಂಡಿದ್ದ.ಡನ್ಜೋ ಮುಖಾಂತರ ಗಿರಾಕಿಗಳಿಗೆ ಡೆಲೇವರಿ ಮಾಡುತ್ತಿದ್ದ.ಸದ್ಯ ಎಸ್.ಜಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ