ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್‌

ಶನಿವಾರ, 27 ಆಗಸ್ಟ್ 2022 (13:50 IST)
ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಸಭೆ ನೆಡೆಯಿತು. ಮುಖ್ಯಮಂತ್ರಿಗಳ ರೇಸ್ ಕೋರ್ಸ್ ನಿವಾಸದಲ್ಲಿ ಸಭೆ ನಡೆಯಿತು.ಸಭೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್, ಬಿಬಿಎಂಪಿ ಕಮಿಷನರ್ ಸೇರಿ ಪ್ರಮುಖ ಅಧಿಕಾರಿಗಳು ಭಾಗಿಯಾಗಿದ್ರು. ಸಭೆ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಗಣೇಶೋತ್ಸವ ಹೇಗೆ ಮಾಡಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ಗಣೇಶೋತ್ಸವ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾತನಾಡಿದ್ದೇವೆ. ಎಲ್ಲಿ ಕೂರಿಸಬೇಕು? ಹೇಗೆ ಸಂಭ್ರಮಾಚರಣೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನೆಡೆಯಿತು ಎಂದರು. ಗಣೇಶೋತ್ಸವ ಅಷ್ಟೆ ಅಲ್ಲ, ಜನವರಿ 26ರ ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವವನ್ನು ಕೂಡ ವಿಜೃಂಭಣೆಯಿಂದ ಮಾಡುತ್ತೇವೆ ಎಂದರು.ಗಣೇಶೋತ್ಸವಕ್ಕೆ ಜಮೀರ್ ಅಹ್ಮದ್ ವಿರೋಧ ವಿಚಾರ ಕುರಿತು 75 ವರ್ಷಗಳಿಂದಲೂ ಫ್ಲ್ಯಾಗ್​ ಹಾರಿಸಿಲ್ಲ, ವಿರೋಧಿಸುತ್ತಲೇ ಬಂದಿದ್ದಾರೆ. ಕೋಳಿ ಕೇಳಿ‌ ಮಸಾಲೆ ಅರೆಯೋಕೆ ಆಗುತ್ತಾ...? ಎಂದು ಜಮೀರ್ ಅಹ್ಮದ್​ಗೆ ಆರ್.ಅಶೋಕ್ ಕೌಂಟರ್ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ