ಗೃಹ ಜ್ಯೋತಿ ಯೋಜನೆ ಹೆಸರಿಗೆ ಮಾತ್ರನಾ, ಹೆಚ್ಚುವರಿ ಬಿಲ್ ಬರ್ತಿರೋದು ಯಾಕೆ

Krishnaveni K

ಬುಧವಾರ, 14 ಆಗಸ್ಟ್ 2024 (10:10 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಯೋಜನೆ ಜಾರಿಗೆ ತಂದಿದ್ದು ಉಚಿತ ವಿದ್ಯುತ್ ನೀಡುತ್ತಿದೆ. ಆದರೆ ಉಚಿತ ವಿದ್ಯುತ್ ಯೋಜನೆ ಫಲಾನುಭವಿಗಳಿಗೆ ಈಗ ಹೊಸ ಶಾಕ್ ಎದುರಾಗಿದೆ.

ಗೃಹಜ್ಯೋತಿ ಫಲಾನುಭವಿಗಳಿಗೆ ಇದುವರೆಗೆ ಶೂನ್ಯ ಬಿಲ್ ಬರುತ್ತಿತ್ತು. ಆದರೆ ಈಗ 100-150 ರೂ. ಬಿಲ್ ಬರುತ್ತಿದೆ. ಇದಕ್ಕೆ ಗೃಹಜ್ಯೋತಿ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೆವಿ ಲೋಡ್ ನೆಪದಲ್ಲಿ ಗೃಹಜ್ಯೋತಿ ಫಲಾನುಭವಿಗಳಿಗೂ ವಿದ್ಯುತ್ ಬಿಲ್ ಬರುತ್ತಿದೆ.

ಹೀಗಿದ್ದ ಮೇಲೆ ಗೃಹಜ್ಯೋತಿ ಉಚಿತ ವಿದ್ಯುತ್ ಎಂಬ ನೆಪ ಯಾಕೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚುವರಿ  ವಿದ್ಯುತ್ ಬಳಕೆ ಮಾಡದೇ ಇದ್ದರೂ ಹೆವಿ ಲೋಡ್ ಹೆಸರಿನಲ್ಲಿ ವಿದ್ಯುತ್ ಬಿಲ್ ಬರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಒಮ್ಮೆ ಶೂನ್ಯ ಬಿಲ್, ಇನ್ನೊಮ್ಮೆ ಹೆವಿ ಲೋಡ್ ಎಂದು ಯದ್ವಾ ತದ್ವಾ ಬಿಲ್. ಒಂದು ವೇಳೆ ವರ್ಷದ ಸರಾಸರಿ ಬಳಕೆಯನ್ನು ಮೀರಿ ವಿದ್ಯುತ್ ಬಳಸಿದರೆ ಹೆವಿಲೋಡ್ ಎಂದು ಪರಿಗಣಿಸಲಾಗುತ್ತದೆ. ವಿದ್ಯುತ್ ಸಂಪರ್ಕ ಪಡೆಯುವಾಗ ಎಷ್ಟು ಸಾಮರ್ಥ್ಯದ ಕೆವಿ ವಿದ್ಯುತ್ ಸಂಪರ್ಕ ಪಡೆದಿದ್ದಾರೋ ಅದನ್ನು ಮೀರಿ ವಿದ್ಯುತ್ ಬಳಸಿದರೆ ಹೆವಿಲೋಡ್ ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ಹೆಚ್ಚುವರಿ ವಿದ್ಯುತ್ ಬಳಸದೇ ಇದ್ದರೂ ಹೆವಿಲೋಡ್ ಹೆಸರಿನಲ್ಲಿ ವಿದ್ಯುತ್ ಬಿಲ್ ಹಾಕುತ್ತಿರುವುದು ಫಲಾನುಭವಿಗಳ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ