ಜಿಎಸ್‌ಟಿ ಮಸೂದೆ ಅಂಗೀಕಾರಕ್ಕಾಗಿ ಸೆ14 ರಂದು ವಿಧಾನಮಂಡಲದ ಅಧಿವೇಶನ

ಬುಧವಾರ, 31 ಆಗಸ್ಟ್ 2016 (18:52 IST)
ಜಿಎಸ್‌ಟಿ ಮಸೂದೆ ಮಂಡನೆಗಾಗಿ ಒಂದು ದಿನದ ವಿಶೇಷ ಅಧಿವೇಶನ ಕರೆಯಲು ಸರಕಾರ ನಿರ್ಧರಿಸಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 14 ರಂದು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲಾಗಿದ್ದು ಅಂದು ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾಗಲಿದ್ದು, ಸರಕು ಸಾಗಣೆ ಮತ್ತು ಸೇವೆ ತೆರಿಗೆ ಮಸೂದೆ ಅಂಗೀಕಾರದ ನಂತರ ಅದಿವೇಶನ ಮುಕ್ತಾಯವಾಗಲಿದೆ.
 
ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಜಿಎಸ್‌ಟಿ ಮಸೂದೆಯನ್ನು ಮಂಡಿಸಲಿದ್ದು, ಸದನದಿಂದ ಅನುಮೋದನೆ ಪಡೆಯಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ