ಜವಳಿ ಮತ್ತು ಪಾದರಕ್ಷೆಗಳ ಮೇಲಿನ ಜಿ.ಎಸ್.ಟಿ.ಯನ್ನು ಶೇ 5 ರಿಂದ ಶೇ 12 ಕ್ಕೆ ಹೆಚ್ಚಿಸಿರುವ ಕುರಿತು ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿದೆ. ಈ ಸಂದರ್ಭದಲ್ಲಿ ಕೌನ್ಸಿಲ್ ಸಭೆ ನಡೆಯುತ್ತಿರುವುದರಿಂದ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ. ಹೀಗಾಗಿ ಆಫ್ ಲೈನ್ ಮೀಟಿಂಗ್ ನಡೆಯುತ್ತಿದ್ದು, ಇತರ ವಿಷಯಗಳ ಜೊತೆಗೆ, ದರ ತರ್ಕಬದ್ಧತೆಯ ಕುರಿತು, ರಾಜ್ಯ ಸಚಿವರ ಸಮಿತಿಯ ರಚಿಸಿರುವ ವರದಿಯನ್ನು ಚರ್ಚಿಸುತ್ತದೆ. ಸರ್ಕಾರದ ಅಧಿಸೂಚನೆಯ ಪ್ರಕಾರ, 1000 ರೂಪಾಯಿಗಿಂತ ಕಡಿಮೆ ಇರುವ ಎಲ್ಲಾ ಪಾದರಕ್ಷೆಗಳ ಮೇಲೆ ಶೇಕಡಾ 12 ರಷ್ಟು GST ಹಾಗೂ ಹತ್ತಿಯಿಂದ ತಯಾರಿಸಿದ ಬಟ್ಟೆಗಳನ್ನು ಹೊರತುಪಡಿಸಿ ಎಲ್ಲಾ ರೆಡಿಮೇಡ್ ಜವಳಿಗಳ ಮೇಲೆ ಶೇಕಡಾ 12 ರಷ್ಟು ಜಿ.ಎಸ್.ಟಿ. ವಿಧಿಸಲು ತೀರ್ಮಾನಿಸಲಾಗಿದೆ. ಈ ಹಿಂದೆ ಈ ವಸ್ತುಗಳನ್ನು ಶೇ 5ರಷ್ಟು ಜಿ.ಎಸ್.ಟಿ. ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು.
ಮೋದಿ ಸರ್ಕಾರವು ಜನವರಿ 1 ರಂದು ಮತ್ತೊಂದು ಪ್ರಮಾದವನ್ನು ಮಾಡಲಿದೆ. ಜವಳಿ ಮೇಲಿನ GST ಅನ್ನು 5% ರಿಂದ 12% ಗೆ ಹೆಚ್ಚಿಸುವ ಮೂಲಕ, 15 ಮಿಲಿಯನ್ ಉದ್ಯೋಗಗಳು ಕಳೆದುಹೋಗುತ್ತವೆ ಮತ್ತು 1 ಲಕ್ಷ ಯೂನಿಟ್‌ಗಳು ಮುಚ್ಚಲ್ಪಡುತ್ತವೆ. ಮೋದಿ ಜೀ, ಈ ನಿರ್ಧಾರವನ್ನ ಮರುಪರಿಶೀಲಿಸುವ ಮೊದಲು GST ಕೌನ್ಸಿಲ್ ಸಭೆಗೆ ಕರೆದು ಚರ್ಚೆ ಮಾಡಿ, ಲಕ್ಷಾಂತರ ಜನಸಾಮಾನ್ಯರ ತಲೆಯ ಮೇಲೆ ಕಲ್ಲು ಹಾಕಬೇಡಿ. ಎಂದು ಮಿತ್ರಾ ಡಿಸೆಂಬರ್ 26 ರಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರದ ನಿರ್ಧಾರವನ್ನು ಹಿಂಪಡೆಯಬೇಕು ಎಂದು ವರ್ತಕರ ಸಂಘಟನೆಗಳು ಒತ್ತಾಯಿಸಿದ್ದು, ಬೆಲೆ ಬದಲಾವಣೆಯು ಬಡವರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಸಾಕಷ್ಟು ವರ್ತಕರು ಈ ಪರಿಷ್ಕರಣೆಯನ್ನ ವಿರೋಧಿಸಿದ್ದು, ನಾಳೆ ನಡೆಯಲಿರುವ ಸಭೆಯ ಮೇಲೆ ಎಲ್ಲರ ಗಮನ ಹರಿದಿದೆ.