ಗುಲಾಂನಬಿ ಆಜಾದ್ ಹೇಳಿಕೆ ಖಂಡಿಸಿದ ಯಡಿಯೂರಪ್ಪ

ಶುಕ್ರವಾರ, 18 ನವೆಂಬರ್ 2016 (18:01 IST)
ನೋಟು ಬದಲಾವಣೆಗಾಗಿ ಬ್ಯಾಂಕ್‌ಗಳ ಮುಂದೆ ನಿಂತವರ ಸಾವಿನ ಪ್ರಕರಣವನ್ನು ಉರಿ ವಲಯದಲ್ಲಿನ ಸೈನಿಕರ ಸಾವಿಕೆ ಹೋಲಿಕೆ ಮಾಡಿರುವ ಕಾಂಗ್ರೆಸ್ ಮುಖಂಡ ಗುಲಾಂನಬಿ ಆಜಾದ್ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಖಂಡಿಸಿದ್ದು, ಈ ಕೂಡಲೇ ಅವರು ದೇಶದ ಜನರ ಕ್ಷೇಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. 
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಗಳಿಗೆಲ್ಲ ಪಾಕಿಸ್ತಾನವೇ ನೇರ ಕಾರಣ ಎನ್ನುವುದು ಗೊತ್ತಿದ್ದರು ಸಹ ಗುಲಾಂನಬಿ ಆಜಾದ್ ಅವರಂತ ನಾಯಕರು ಪಾಕ್ ಪರವಾಗಿ ಹೇಳಿಕೆ ನೀಡುವುದು ದುರಂತ ಎಂದರು.
 
ಉಗ್ರವಾದದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾಂಗ್ರೆಸ್ ಇದೀಗ ಪ್ರಧಾನಿ ಮೋದಿ ಅವರನ್ನು ಟೀಕಿಸುವಾಗ ಪಾಕಿಸ್ತಾನದ ಪರವಾಗಿ ಮೃದು ಧೋರಣೆ ತೋರುತ್ತಿರುವುದು ಏಕೆ ಎಂದು ಖಾರವಾಗಿ ಪ್ರಶ್ನಿಸಿದರು. 
 
ನೋಟು ಬದಲಾವಣೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ತಾಳ್ಮೆಯಿಂದ ವರ್ತಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಜನರನ್ನು ಪ್ರಚೋದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ