ಹೊಳೆ ಬದಿ ಸ್ನಾನ ಮಾಡುವಾಗ ಬಂತೊಂದು ದೊಡ್ಡ ಸರ್ಪ: ಶಾಕಿಂಗ್ ವಿಡಿಯೋ
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಈಗ ಭಾರೀ ವೈರಲ್ ಆಗಿದೆ. ರಜೆ ವೇಳೆ ಕಾಡು-ಮೇಡುಗಳಲ್ಲಿ ಸುತ್ತಾಡುವ, ಘಾಟಿ ರಸ್ತೆಗಳಲ್ಲಿ ಸಿಕ್ಕ ನೀರಿನ ತೊರೆಯಲ್ಲಿ ನೀರಾಟವಾಡಲು ಹೋಗುವವರು ಇಂತಹ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಬೇಕು ಎಂಬುದನ್ನು ಈ ವಿಡಿಯೋ ತೋರಿಸಿಕೊಡುತ್ತದೆ.
ನಾಲ್ಕೈದು ಜನ ಯುವಕರ ಗುಂಪು ಕಾಡಿನಲ್ಲಿ ನೀರಿನ ತೊರೆಯಲ್ಲಿ ಈಜಾಡುತ್ತಾ ಎಂಜಾಯ್ ಮಾಡುತ್ತಿರುತ್ತದೆ. ಮರ, ಪೊದೆಗಳಿರುವ ದಟ್ಟ ಅರಣ್ಯ ಪ್ರದೇಶವದು. ಶುದ್ಧ ನೀರು ಹರಿಯುವ ಜಾಗದಲ್ಲಿ ಸ್ನಾನ ಮಾಡುತ್ತಿದ್ದ ಯುವಕರು ಮೈಮರೆತಿದ್ದಾಗಲೇ ಅನಾಹುತ ನಡೆಯುತ್ತದೆ.
ಮರಗಳ ನಡುವಿನಿಂದ ದೈತ್ಯ ಗಾತ್ರದ ಸರ್ಪವೊಂದು ಇದ್ದಕ್ಕಿದ್ದಂತೆ ಹೆಡೆ ಬಿಚ್ಚಿ ಕಚ್ಚಲು ಮುಂದಾಗುತ್ತದೆ. ಹಿಂಬದಿಯಿಂದ ದೈತ್ಯ ಹಾವೊಂದು ಅಟ್ಯಾಕ್ ಮಾಡಲು ಬಂದಾಗ ಭಯಗೊಂಡ ಯುವಕರು ನೀರಿಗೆ ಧುಮುಕಿ ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಈ ಭಯಾನಕ ವಿಡಿಯೋ ಇಲ್ಲಿದೆ ನೋಡಿ.