ಆಯುಧ ಪೂಜೆಗೆ ಗನ್, ತುಪಾಕಿ ಬಳಕೆ: ಪೊಲೀಸ್ ಇಲಾಖೆಯಿಂದ ನೋಟಿಸ್

ಭಾನುವಾರ, 21 ಅಕ್ಟೋಬರ್ 2018 (14:18 IST)
ಆಯುಧ ಪೂಜೆಗೆ  ಗನ್ ಹಾಗೂ ತುಫಾಕಿ ಗಳನ್ನು ಇಟ್ಟು ಪೂಜೆ ಮಾಡಿದ ಕುಟುಂಬವೊಂದು ಇದೀಗ  ಪೇಚಿಗೆ ಸಿಲುಕಿಕೊಂಡಿದೆ. ಪೊಲೀಸ್ ಇಲಾಖೆ ನೋಟೀಸ್ ಜಾರಿ ಮಾಡಿದೆ.

ದಾವಣಗೆರೆಯ ಹಳೇ ಕುಂದುವಾಡದಲ್ಲಿ ದೊಡ್ಡಪ್ಪ ಅವರ ಮಕ್ಕಳಾದ  ದಯಾನಂದ್ ಗಜಾನನ ಆಯುಧ ಪೂಜೆಯನ್ನು ಸಡಗರ  ಸಂಭ್ರಮದಿಂದ ಆಚರಿಸಿದರು. ಪೂಜೆ ನಂತರ ಪೂಜೆ ನಂತರ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಿಸಿದರು. ದೊಡ್ಡಪ್ಪ ಅವರ ಮಗ ದಯಾನಂದ ಪೂಜೆ ನಂತರ ರಿವಾಲ್ವರ್, ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದರು. ಹೀಗೆ ಗುಂಡು ಹಾರಿಸಿದ ಪೂಜೆ ಮಾಡಿದ ಪೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಸಂಭ್ರಮಿಸಿದರು. ಆದರೆ ಎರಡು ದಿನಗಳ ನಂತರ ಹೀಗೆ ಹಾಕಿದ ಪೋಟೋ ವಿಡಿಯೋಗಳು ವೈರಲ್ ಆಗಿ ಇದೀಗ ದಾವಣಗೆರೆ ವಿದ್ಯಾನಗರ ಪೊಲೀಸರಿಂದ ನೋಟೀಸ್ ಜಾರಿ ಮಾಡಲಾಗಿದೆ ಎನ್ನಲಾಗಿದೆ.

ನಿಮ್ಮಲ್ಲಿರುವ ಗನ್ ಗಳೆಷ್ಟು? ಲೈಸನ್ಸ್  ಹೊಂದಲಾಗಿದೆಯಾ ? ಗನ್ ಗಳನ್ನು ಹೊಂದಿರುವುದು ಯಾವ ಉದ್ದೇಶಕ್ಕೆ ಎಂಬ ಬಗ್ಗೆ ಪೊಲೀಸರು ಸ್ಪಷ್ಟನೆ ಕೇಳಿದ್ದಾರೆ. ಗನ್ ಗಳಿಗೆ ಪರ್ಮಿಟ್ ಹೊಂದಿದ್ರು ಸುಖಾಸುಮ್ಮನೆ  ಗಾಳಿಯಲ್ಲಿ ಗುಂಡು ಹಾರಿಸುವಂತಿಲ್ಲ ಎಂಬ ನಿಯಮವಿದೆ. ಆತ್ಮರಕ್ಷಣೆಗೆ ಇಟ್ಟುಕೊಂಡ ಗನ್ ಗಳಿಂದ  ಸಾರ್ವಜನಿಕ ಶಾಂತಿಗೆ ಯಾವ ಭಂಗ ಬರಬಾರದೆಂದು ಗನ್, ರೈಪಲ್ ಬಳಕೆ ಮಾಡಬೇಕು. ಆದರೆ ಆಯುಧ ಪೂಜೆ ಸಂಭ್ರಮದಲ್ಲಿ ಬಂದೂಕಗಳನ್ನು ಪ್ರದರ್ಶನ ಮಾಡಿದ ದೊಡ್ಡಪ್ಪನ ಕುಟುಂಬ ಇದೀಗ ವಿದ್ಯಾನಗರ ಪೊಲೀಸ್ ಠಾಣೆಗೆ ಲೈಸನ್ಸ್ ಹಾಜರುಪಡಿಸಬೇಕು.

ಆದರೆ  ಚಿತ್ರದಲ್ಲಿ ಕಂಡುಬಂದಿರುವ ಎಲ್ಲಾ  ಗನ್  ಗಳಿಗೆ ಲೈಸನ್ಸ್ ಸಲ್ಲಿಸಿಲ್ಲವೆಂದು ಪೊಲೀಸ ಮೂಲಗಳು ತಿಳಿಸಿವೆ.  ವಿದ್ಯಾನಗರ ಪೊಲೀಸ್ ಠಾಣೆಗೆ  1 ಪಿಸ್ತೂಲ್ , 1 ಸಿಂಗಲ್ ಬ್ಯಾರಲ್ , 1 ಡಬಲ್ ಬ್ಯಾರಲ್  ಬಂದೂಕಿನ ಲೈಸನ್ಸ್ ಮಾತ್ರ  ಹಾಜರುಪಡಿಸಿದ್ದು ಉಳಿದ ಗನ್ ಗಳಿಗು ಪರವಾನಿಗೆ ಪತ್ರ ಸಲ್ಲಿಸಿಲ್ಲ. ಎಲ್ಲಾ ಗನ್ ಗಳಿಗೂ ಲೈಸನ್ಸ್ ಸಲ್ಲಿಸಬೇಕೆಂದು ಮತ್ತೊಮ್ಮೆ ಮೌಖಿಕ ಆದೇಶ ನೀಡಿದ್ದು, ದೊಡ್ಡಪ್ಪನ‌ ಕುಟುಂಬ ಏನು ಮಾಡುತ್ತದೋ ಕಾಯ್ದು ನೋಡಬೇಕಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ