ಗನ್ ಮ್ಯಾನ್ ಕೈಯಲ್ಲಿ ಶೂ ಕ್ಲೀನ್ ಮಾಡಿಸಿ ವಿವಾದಕ್ಕೀಡಾದ ಡಿಸಿಎಂ ಪರಮೇಶ್ವರ್
ಇಂದು ತಮ್ಮ ಬೆಂಬಲಿಗರೊಂದಿಗೆ ಸಿಟಿ ರೌಂಡ್ಸ್ ಮಾಡುತ್ತಿದ್ದ ಡಿಸಿಎಂ ಪರಮೇಶ್ವರ್ ರಾಜಾಕಾಲುವೆ ಬಳಿ ಪರಿಶೀಲನೆ ನಡೆಸುತ್ತಿದ್ದಾಗ ಕೊಳಚೆ ನೀರು ಶೂ ಮತ್ತು ಪ್ಯಾಂಟ್ ಮೇಲೆ ಬಿತ್ತು.
ತಕ್ಷಣ ಅಲ್ಲಿದ್ದ ಕಾರ್ಯಕರ್ತರು ಪರಮೇಶ್ವರ್ ಶೂ ಶುಚಿ ಮಾಡಲು ಮುಂದಾಗುತ್ತಾರೆ. ಆದರೆ ಡಿಸಿಎಂ ಪರಮೇಶ್ವರ್ ತಮ್ಮ ಭದ್ರತಾ ಸಿಬ್ಬಂದಿಗೆ ಶೂ, ಬಟ್ಟೆ ಶುಚಿ ಮಾಡಲು ನಿರ್ದೇಶನ ನೀಡುತ್ತಾರೆ. ಡಿಸಿಎಂ ಪರಮೇಶ್ವರ್ ಆದೇಶಕ್ಕೆ ತಲೆಬಾಗಿ ಭದ್ರತಾ ಸಿಬ್ಬಂದಿಗಳು ಶೂ ಶುಚಿಗೊಳಿಸುತ್ತಾರೆ. ಈ ವಿಡಿಯೋಗಳು ಇದೀಗ ಖಾಸಗಿ ವಾಹಿನಿಯಲ್ಲಿ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದೆ.