ಸಚಿವ ಎಚ್.ಸಿ.ಮಹದೇವಪ್ರಸಾದ್‌ಗೆ ಹೃದಯಘಾತ?

ಮಂಗಳವಾರ, 3 ಜನವರಿ 2017 (10:19 IST)
ಸಚಿವ ಎಚ್.ಸಿ.ಮಹದೇವಪ್ರಸಾದ್ ಅವರಿಗೆ ಹೃದಯಘಾತವಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿರುವ ಖಾಸಗಿ ರೆಸಾರ್ಟ‌್‌ನಲ್ಲಿ ತಂಗಿದ್ದ ಸಹಕಾರ-ಸಕ್ಕರೆ ಸಚಿವ ಸಚಿವ ಎಚ್.ಸಿ.ಮಹದೇವಪ್ರಸಾದ್ ಅವರಿಗೆ ಇಂದು ಮುಂಜಾನೆ ಹೃದಯಘಾತವಾಗಿದೆ ಎನ್ನಲಾಗಿದೆ. 
 
ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದ ಅವರು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿರುವ ಖಾಸಗಿ ರೆಸಾರ್ಟ‌್‌ನಲ್ಲಿ ತಂಗಿದ್ದರು. ರೆಸಾರ್ಟ‌್‌‌ನ ಕೊಠಡಿಯಲ್ಲಿಯೇ ಅವರಿಗೆ ಹೃದಯಘಾತವಾಗಿದ್ದು, ಅವರ ದೇಹಸ್ಥಿತಿ ಕುರಿತು ಸ್ಪಷ್ಟವಾದ ಮಾಹಿತಿ ಲಭ್ಯವಾಗುತ್ತಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ