ಸಚಿವ ಎಚ್.ಸಿ.ಮಹದೇವಪ್ರಸಾದ್‌ ಇನ್ನಿಲ್ಲ!

ಮಂಗಳವಾರ, 3 ಜನವರಿ 2017 (10:30 IST)
ಸಚಿವ ಎಚ್.ಸಿ.ಮಹದೇವಪ್ರಸಾದ್ ಅವರು ಇಂದು ಹೃದಯಘಾತದಿಂದ ನಿಧನರಾಗಿದ್ದಾರೆ. 
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿರುವ ಖಾಸಗಿ ರೆಸಾರ್ಟ‌್‌ನಲ್ಲಿ ತಂಗಿದ್ದ ಸಹಕಾರ-ಸಕ್ಕರೆ ಸಚಿವ ಸಚಿವ ಎಚ್.ಸಿ.ಮಹದೇವಪ್ರಸಾದ್ ಅವರಿಗೆ ಇಂದು ಮುಂಜಾನೆ ಹೃದಯಘಾತವಾಗಿದ್ದು, ರೆಸಾರ್ಟ್‌ನ ಕೊಠಡಿಯಲ್ಲಿಯೇ ಅವರು ವಿಧಿವಶರಾಗಿದ್ದಾರೆ ಎಂದು ಹೇಳಲಾಗುತ್ತಿದೆ.  
 
ಈ ಹಿಂದೆ ಸಹಕಾರ-ಸಕ್ಕರೆ ಸಚಿವ ಸಚಿವ ಎಚ್.ಸಿ.ಮಹದೇವಪ್ರಸಾದ್ ಅವರಿಗೆ ಬೈಪಾಸ್ ಸರ್ಜರಿ ಆಗಿತ್ತು. ಆದರೆ, ದುರಾದೃಷ್ಟವಶಾತ್ ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 
 
ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದ ಅವರು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿರುವ ಖಾಸಗಿ ರೆಸಾರ್ಟ‌್‌ನಲ್ಲಿ ತಂಗಿದ್ದರು. ರೆಸಾರ್ಟ‌್‌‌ನ ಕೊಠಡಿಯಲ್ಲಿಯೇ ಅವರಿಗೆ ಹೃದಯಘಾತವಾಗಿ ವಿಧಿವಶರಾಗಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ