ಬೆಂಗಳೂರು: ಭೀಮಾ ಜ್ಯುವಲ್ಲರ್ಸ್ ಮಾಲೀಕನ ಮಗ ವಿಷ್ಣು ಭಟ್ ಹಾಗೂ ಹ್ಯಾಕರ್ ಶ್ರೀಕಿ ಹೋಟೆಲ್ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ಚಿಸ್ಟ್ ಸಿಗುತ್ತಿದ್ದು, ಇದೀಗ ಪೊಲೀಸ್ ಬಂಧನದಲ್ಲಿರುವ ವಿಷ್ಣು ಭಟ್ ನನಗೆ ಶ್ರೀಕಿ ಅಂದರೆ ಯಾರು ಎಂದು ಗೊತ್ತೇ ಇಲ್ಲ ಎಂದಿರುವ ಮಾಹಿತಿ ದೊರೆತಿದೆ.
ಹೋಟೆಲ್ ಒಳಗೆ ಹೋದಾಗ ಲಿಫ್ಟ್ ಹತ್ತಿ ಅಭಯ್ ಇದ್ದ ರೂಂ ಕಡೆ ಹೊರಟಿದ್ದೆ, ಆದರೆ ನಶೆಯಲ್ಲಿದ್ದ ಕಾರಣ ಅಭಯ್ ಇದ್ದ ರೂಂ ಮಿಸ್ಸಾಗಿ ಶ್ರೀಕಿ ರೂಂ ಬಾಗಿಲು ತಟ್ಟಿದೆ. ಲಿಫ್ಟ್ ನಲ್ಲೇ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದಕ್ಕೆ ಹೋಟೆಲ್ ಸಿಬ್ಬಂದಿ ಹೊಯ್ಸಳಕ್ಕೆ ಕರೆ ಮಾಡಿದ್ದರು ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗುತ್ತಿದೆ.