ಕರ್ನಾಟಕ ನಂ.1 ಆಗಿಸುವ ಗುರಿ : ಬೊಮ್ಮಾಯಿ

ಮಂಗಳವಾರ, 7 ಫೆಬ್ರವರಿ 2023 (11:46 IST)
ಬೆಂಗಳೂರು :  ಕಳೆದ ತಿಂಗಳು ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 9 ಉದ್ದಿಮೆಗಳು ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ 3 ಲಕ್ಷ ಕೋಟಿ ಬಂಡವಾಳದಲ್ಲಿ ಸುಮಾರು 2 ಲಕ್ಷ ಕೋಟಿ ನವೀಕರಿಸಬಹುದಾದ ಇಂಧನ ಉತ್ಪಾದನೆ ಕ್ಷೇತ್ರಕ್ಕೆ ಅವಕಾಶ ಕಲ್ಪಿಸಿದೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ಇ.ವಿ (ವಿದ್ಯುತ್ ಚಾಲಿತ ವಾಹನ) ಸಾರಿಗೆ ವಾಹನಗಳ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯ ಸಂಶೋಧನೆ ನಡೆದಿವೆ.

ಈ ನಿಟ್ಟಿನಲ್ಲಿ ಕರ್ನಾಟವನ್ನು ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ದೇಶದಲ್ಲಿಯೇ ನಂ.1 ಆಗಿಸುವ ಗುರಿಯಿದೆ. ಇದಕ್ಕೆ ಪೂರಕವಾಗಿ ಬಂಡವಾಳ ಸ್ನೇಹಿ ಇ.ವಿ ನೀತಿಯನ್ನೂ ತರಲಾಗಿದೆ ಎಂದು ವಿವರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ