ಹಲಾಲ್ V/S ಜಟ್ಕಾ ಕಟ್

ಬುಧವಾರ, 30 ಮಾರ್ಚ್ 2022 (18:58 IST)
ಹಿಜಾಬ್​ನಿಂದ ಆರಂಭವಾದ ಗಲಾಟೆ ಹಲಾಲ್​​​ವರೆಗೆ ಬಂದು ನಿಂತಿದೆ. ಸದ್ಯ ರಾಜ್ಯದಲ್ಲಿ ಹಲಾಲ್ ಮಾಂಸ ಖರೀದಿ ಮಾಡದಂತೆ ಬಾಯ್ಕಾಟ್ ಹಲಾಲ್​ ಅಭಿಯಾನ ಆರಂಭವಾಗಿದೆ​. ಮುಸ್ಲಿಂ ಧರ್ಮದ ಆಹಾರ ಕ್ರಮಕ್ಕೆ ಹಲಾಲ್ ಎಂದು ಹೇಳಲಾಗುತ್ತದೆ. ಬಲಿ ಕೊಡುವ ಪ್ರಾಣಿಯ ರಕ್ತ ನಾಳವನ್ನು ಕುಯ್ಯಲಾಗುತ್ತದೆ. ಇದರಿಂದ ರಕ್ತ ಪೂರ್ತಿ ಹೊರಬರುತ್ತದೆ. ಈ ಮೂಲಕ ರಕ್ತದಲ್ಲಿರುವ ಬ್ಯಾಕ್ಟೀರಿಯಾಗಳು ಹೊರಗೆ ಬರುತ್ತವೆ. ನಂತರ ಶುದ್ಧ ಮಾಂಸ ಸಿಗುತ್ತದೆ. ಇನ್ನು ಮೆಕ್ಕಾ ಕಡೆ ಮುಖ ಮಾಡಿ ಪ್ರಾಣಿಗಳನ್ನ ಕುಯ್ಯುತ್ತಾರೆ. ಇದನ್ನು ಹಲಾಲ್ ಕಟ್ ಎಂದು ಕರೆಯುತ್ತಾರೆ. ಇನ್ನು ಜಟ್ಕಾ ಕಟ್ ಎಂದರೆ ಒಂದು ಪ್ರಾಣಿಯ ವಧೆ ಒಂದೇ ಬಾರಿಗೆ ನಡೆಯುತ್ತದೆ. ಸಾವಿನಲ್ಲೂ ಸಹ ನೋವು ನೀಡದೆ ಪ್ರಾಣಿಯ ಬಲಿ ಕೊಡುವುದಕ್ಕೆ ಜಟ್ಕಾ ಕಟ್ ಎನ್ನುತ್ತಾರೆ. ಜಟ್ಕಾ ಕಟ್ ಅಂದರೆ ದೈವ ಬಲಿ ಎಂದು ಕರೆಯುತ್ತಾರೆ. ಒಂದೇ ಏಟಿಗೆ ರುಂಡ, ಮುಂಡವನ್ನು ಬೇರ್ಪಡಿಸಲಾಗುತ್ತದೆ. ಯಾವುದೇ ಆಹಾರವನ್ನು ಸೇವಿಸುವ ಮೊದಲು ದೇವರಿಗೆ ನೈವೇದ್ಯ ಅರ್ಪಿಸಿ ತಿನ್ನುವುದನ್ನು ಪೂರ್ವಜರು ಕಲಿಸಿಕೊಟ್ಟ ಕ್ರಿಯೆಗೆ ಜಟ್ಕಾ ಕಟ್ ಎನ್ನುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ