ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳು ಸಿಎಂ ಹೇಳಿದ್ದೇನು

ಬುಧವಾರ, 30 ಮಾರ್ಚ್ 2022 (15:29 IST)
ರಾಜ್ಯದಲ್ಲಿ ಹಲಾಲ್‌ ವಿರುದ್ದ ಹಿಂದೂ ಸಂಘಟನೆಗಳು ಸಮರ ಸಾರಿದ್ದು, ಮುಸ್ಲಿಂರ ಅಂಗಡಿಯಲ್ಲಿ ಮಾರಾಟ ಮಾಡುವ ಹಲಾಲ್‌ ಮಾಂಸವನ್ನು ಖರೀದಿ ಮಾಡದಂತೆ ಸಮರ ಸಾರಿದ್ದು, ಹಿಂದೂಗಳ ಜಟ್ಕಾ ಸಂಪ್ರಾದಯದಲ್ಲಿ ಮಾಂಸವನ್ನು ಕಟ್‌ ಮಾಡಿರುವವರ ಬಳಿಯಿಂದ ಮಾಂಸವನ್ನು ಖರೀದಿ ಮಾಡುವಂತೆ ಹೇಳುತ್ತಿದ್ದಾರೆ.
ರಾಜ್ಯ ರಾಜಕೀಯದಲ್ಲೂ ಕೂಡ ಇದು ದೊಡ್ಡ ಬಿರುಗಾಳಿಯನ್ನು ಹಬ್ಬಿಸಿದ್ದು, ಮುಸ್ಲಿಂ ಮಾಂಸ ವರ್ತಕರ ಮೇಲೆ ದೊಡ್ಡ ಪರಿಣಾಮವನ್ನು ಬೀರುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ. ಯುಗಾದಿ ಮರು ದಿನ ಹಿಂದೂಗಳು ಮಾಡುವ ಹೊಸ ತಡುಕಿನ ವೇಳೆಯಲ್ಲಿ ಹಿಂದೂಗಳ ಅಂಗಡಿಯಿಂದಲೇ ಮಾಂಸವನ್ನು ಖರೀದಿ ಮಾಡುವಂತೆ ಹೆಚ್ಚು ಪ್ರಚಾರ ಕೂಡ ನಡೆಯುತ್ತಿದೆ. ಇದೇ ವೇಳೇ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಅಭಿವೃದ್ದಿಯತ್ತ ನಡೆಯುತ್ತಿದ್ದು, ನಾವು ಯಾವುದರ ಕಡೆ ಗಮನ ನೀಡಬೇಕೋ ಅದರ ಕಡೆಗೆ ನೀಡುತ್ತೇವೆ ಅಂತ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ