ಹಾಲಶ್ರೀ 10 ದಿನ ಸಿಸಿಬಿ ಕಸ್ಟಡಿಗೆ
ಚೈತ್ರಾ ಕುಂದಾಪುರ ಆ್ಯಂಡ್ ಗ್ಯಾಂಗ್ನಿಂದ 5 ಕೋಟಿ ವಂಚನೆ ಪ್ರಕರಣದ 3ನೇ ಆರೋಪಿ ಅಭಿನವ ಹಾಲಶ್ರೀಯನ್ನು ಕೋರ್ಟ್ 10 ದಿನಗಳ ಕಾಲ CCB ಕಸ್ಟಡಿಗೆ ನೀಡಿದೆ. ಸೆಪ್ಟೆಂಬರ್ 30ರವರೆಗೆ ಹಾಲಶ್ರೀಯನ್ನು CCB ಕಸ್ಟಡಿಗೆ ನೀಡಿ ಬೆಂಗಳೂರಿನ 19ನೇ ACMM ನ್ಯಾಯಾಲಯ ಆದೇಶ ಹೊರಡಿಸಿದೆ.
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚನೆ ಪ್ರಕರಣದಲ್ಲಿ ಬಂಧಿತಳಾಗಿರುವ ಚೈತ್ರಾ ಕುಂದಾಪುರ, ಆರೋಪಿ ಹಾಲಶ್ರೀ ಬಂಧನವಾದ ಬಳಿಕ ಫುಲ್ ಹ್ಯಾಪಿ ಆಗಿದ್ದಾರಂತೆ. ಇಷ್ಟು ದಿನ ಮೌನವಾಗಿದ್ದ ಚೈತ್ರಾ ಇವತ್ತು ಫುಲ್ ಹ್ಯಾಪಿ ಆಗಿದ್ದಾರಂತೆ.. ಸಿಬ್ಬಂದಿ ಜೊತೆಯೂ ನಗುನಗುತ್ತಲೇ ಇದ್ದಾರೆ. ಚೈತ್ರಾ ಈ ನಗುವಿನ ಹಿಂದಿನ ರಹಸ್ಯ ಏನು ಎಂಬುದು ಸದ್ಯದ ಪ್ರಶ್ನೆಯಾಗಿದೆ.. ಹಾಲಶ್ರೀ ಅರೆಸ್ಟ್ ಆಗಿದ್ದೇ ಚೈತ್ರಾ ಮುಖದಲ್ಲಿ ಮಂದಹಾಸ ಮೂಡಲು ಕಾರಣ ಎನ್ನಲಾಗಿದೆ.. ಹಾಲಶ್ರೀ ಒಂದೂವರೆ ಕೋಟಿಗೂ ಹೆಚ್ಚಿನ ಹಣ ಪಡೆದಿದ್ದಾರಾ ಎಂಬ ಅನುಮಾನ ಮೂಡಿದೆ.. ಇದರ ಜೊತೆಗೆ ಚೈತ್ರಾ ಕುಂದಾಪುರ ಪ್ರಾಪರ್ಟಿ ಹಾಗೂ ಹಣದ ಬಗ್ಗೆಯೂ ಇಂದು ದಾಖಲೆಗಳು ನೀಡೋ ಸಾಧ್ಯತೆ ಇದೆ.