ಆಯುಷ್ ಸಾಹು, ರಾಜಬಾಬು, ರಾಜ್ ಆರ್ಯನ್ ಮತ್ತು ರಾಜೇಶ್ ಚೌದರಿ ಎಂಬುವವರು ಹಂಪಿಯ ವಿಷ್ಣು ದೇವಾಲಯದ ಹಿಂಭಾಗದ ಗಜಶಾಲೆಯ ಬಳಿಯ ಸಾಲು ಕಂಬಗಳನ್ನ ಕೆಡವಿದ್ದರು. ಇದಕ್ಕೆ ಸಂಬಂಧಪಟ್ಟ ವಿಡಿಯೋ ಫೆಬ್ರವರಿ 1 ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಯ ಬಗ್ಗೆ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದರು.
ಆದರೆ ಇದೀಗ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಸಿದ ಹೊಸಪೇಟೆಯ ಜೆಎಂಎಫ್ ಸಿ ನ್ಯಾಯಾದೀಶೆ ಪೂಣಿರ್ಮಾ ಯಾಧವ ಅವರು ಸ್ಮಾರಕಗಳನ್ನ ಕೆಡವಿದ ಆರೋಪಿಗಳಿಗೆ ತಲಾ 70 ಸಾವಿರ ರೂಪಾಯಿ ದಂಡ ವಿಧಿಸಿದ್ದಲ್ಲದೇ, ಕೆಡವಿದ ಸ್ಮಾರಕಗಳನ್ನ ಆರೋಪಿಗಳೇ ಮರಳಿ ನಿಲ್ಲಿಸುವಂತೆ ಸೂಚಿಸಿದೆ. ಅಷ್ಟೇ ಅಲ್ಲದೇ ಮರಳಿ ಸ್ಮಾರಕಗಳನ್ನ ನಿಲ್ಲಿಸಿದ ಬಗ್ಗೆ ಪ್ರಾಚ್ಯವಸ್ತು ಇಲಾಖೆ ಹಾಗೂ ಪೊಲೀಸರು ವರದಿ ನೀಡಿದ ನಂತರ ನ್ಯಾಯಾಲಯ ಜಾಮೀನು ಮಂಜೂರು ಮಾಡುವುದಾಗಿ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.