ಕಾಂಗ್ರೆಸ್ ಬಾವುಟ ಹಾರಿಸಲು ಕೈ ಪಡೆ ಕಾರ್ಯತಂತ್ರ
ಬಿಜೆಪಿ ಯ ಭದ್ರಕೋಟೆ ಎನ್ನಿಸಿಕೊಂಡಿರುವ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮೇಲೆ ಕಾಂಗ್ರೆಸ್ ಬಾವುಟ ಹಾರಿಸಲು ಕೈ ಪಡೆ ಕಾರ್ಯತಂತ್ರ ರೂಪಿಸಿದೆ. ಇಂದು ಸಹ ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ರಮೇಶ್ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ರು. ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡತೋಗುರು ಯ ಗ್ರಾಮದಲ್ಲಿ ಮತಯಾಚನೆ ನಡೆಸಿದ ರಮೇಶ್ ಕಾಂಗ್ರೆಸ್ ಗ್ಯಾರಂಟಿಗಳನ್ನ ಈಡೇರಿಸುತ್ತೆ ಏನು ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನಕ್ಕೆ ಕಾಂಗ್ರೆಸ್ ಆಶಾ ಕಿರಣ ವಾಗಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಿಮ್ಮ ಕಷ್ಟಗಳಿಗೆ ಸ್ಪಂದಿಸುವ ಕೆಲಸ ನಮ್ಮ ಪಾರ್ಟಿ ಮಾಡುತ್ತೆ ದಯಮಾಡಿ ನನಗೆ ಒಂದು ಅವಕಾಶ ಮಾಡಿಕೋಡಿ ಎಂದ್ರು.ಅಲ್ಲದೆ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವ ನಿಟ್ಟಿನಲ್ಲಿ ಕಾವೇರಿ ನೀರು ಪೂರೈಕೆ ಸಹ ಮಾಡಲಾಗುತ್ತೆ ಗ್ರಾಮ ಪಂಚಾಯತಿ ಮಟ್ಟದಿಂದ ನಗರಸಭೆಗೆ ಕೊಂಡೊಯ್ದು ಸಾಕಾಷ್ಟು ಅನುದಾನಗಳನ್ನ ತಂದು ಸರ್ವತೋಮುಖ ಅಭಿವೃದ್ಧಿ ಮಾಡುತ್ತೇನೆ .ಕಳೆದ ಬಾರಿ ಕೂಡ ಚುನಾವಣೆಯಲ್ಲಿ ನಿಂತು ಸೋತ್ತಿದ್ದೇನೆ ಆದ್ರು ಕೂಡ ನಿಮ್ಮ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ .ಇನ್ಮುಂದೆ ಕೂಡ ನಿಮ್ಮ ಜತೆ ನಿಲ್ಲುತ್ತೇನೆ ನನಗೆ ಮತಕೊಟ್ಟು ಆರ್ಶಿವಾದ ಮಾಡಿ ಎಂದ್ರು