ಕೂಲ್ ಡ್ರಿಂಕ್ಸ್ ವ್ಯಾಪಾರಿ ನಷ್ಟ ಭರಿಸಿದ ಪ್ರತಾಪ್
ಇತ್ತೀಚೆಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಭವ್ಯ ಸಾರ್ವಜನಿಕ ಸಮಾವೇಶ ನಡೆದಿತ್ತು. ಸಮಾವೇಶದ ಸಮೀಪ ಕೂಲ್ ಡ್ರಿಂಕ್ಸ್ ಮಾರಲು ಸಮೀರ್ ಎಂಬಾತ ಬಂದಿದ್ದ. ಸಮಾರಂಭದಲ್ಲಿ ಭಾಗವಹಿಸಿದ್ದ ಜನರು, ಈ ವಾಹನವನ್ನು ಬಿಜೆಪಿಯವರೇ ತರಿಸಿದ್ದಾರೆ. ಬೇಸಿಗೆಯ ಬಿಸಿಲಿನ ಧಗೆ, ಬಾಯಾರಿಕೆಯನ್ನು ನಿವಾರಿಸಿಕೊಳ್ಳಲು ಬಿಜೆಪಿಯವರೇ ಕಲ್ಪಿಸಿರುವ ವ್ಯವಸ್ಥೆಯಿದು ಎಂದು ತಿಳಿದು, ಎಲ್ಲರೂ ಗಾಡಿಗೆ ಮುತ್ತಿಗೆ ಹಾಕಿ, ಕೂಲ್ ಡ್ರಿಂಕ್ಸ್ ಖಾಲಿ ಮಾಡಿದ್ರು. ಸುಮಾರು 35 ಸಾವಿರ ನಷ್ಟವನ್ನು ಅನುಭವಿಸಿದ ಸಮೀರ್ ಸಾಬ್ ಕಣ್ಣೀರು ಹಾಕಿದ್ರು. ಈ ನಷ್ಟವನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಭರಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ಸಮೀರ್ ಹಸನ್ ಸಾಬ್ಗೆ ಹಣ ಕಳುಹಿಸಿ ಸಾರಿ ಬ್ರದರ್ ಎಂದು ಕ್ಷಮೆಯಾಚಿಸಿ, ಧನ್ಯವಾದಗಳು ಎಂದು ಹೇಳಿದ್ದಾರೆ. ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಹರಿದುಬಂದಿದೆ.