ಮೆದುಳು ಆಪರೇಷನ್ ನಡೆಯುತ್ತಿದ್ರೂ ಹನುಮಾನ್ ಚಾಲೀಸ್ ಜಪಿಸುತ್ತಿದ್ದ ಮಹಿಳೆ !

ಶನಿವಾರ, 24 ಜುಲೈ 2021 (11:57 IST)
ನವದೆಹಲಿ(ಜು.24): ಆಪರೇಷನ್ ಕೊಠಡಿಯಲ್ಲಿದ್ದ 24 ವರ್ಷದ ಯುವತಿ ಸತತ ಹನುಮಾನ್ ಚಾಲೀಸ್ ಜಪಿಸುತ್ತಿದ್ದಳು. ಆಕೆಗೆ ಅತ್ಯಂತ ಕಠಿಣವಾದ ಪರೀಕ್ಷೆ ಅದಾಗಿತ್ತು.

ಸಾವು ಬದುಕಿನ ಆಯ್ಕೆಗಳಷ್ಟೇ ಇದ್ದವು. ಬಾಳಿ ಬದುಕಬೇಕಾದ ಯುವತಿಗೆ ಸಣ್ಣ ವಯಸ್ಸಿನಲ್ಲೇ ಬ್ರೈನ್ ಟ್ಯೂಮರ್ ಆಗಿ ಚಿಕಿತ್ಸೆಗೆ ಒಳಗಾಗಿದ್ದಳು. ಅಂದು ಆಕೆಯ ಮೆದುಳಿನ ಆಪರೇಷನ್ ಸಮಯ.
ವೈದ್ಯರು, ತಜ್ಞರು ಕ್ಲಿಷ್ಟಕರವಾದ ಒಂದು ಆಪರೇಷನ್ ನಡೆಸುತ್ತಿದ್ದರೆ ಯುವತಿ ಹನುಮಾನ್ ಚಾಲೀಸ್ ಜಪಿಸುತ್ತಿದ್ದಳು. ಏಮ್ಸ್ನ ವೈದ್ಯರು ಆಕೆಯಲ್ಲಿದ್ದ ಬ್ರೈನ್ ಟ್ಯೂಮರ್ ಯಶಸ್ವಿಯಾಗಿ ಹೊರ ತೆಗೆಯುವಾಗಲೂ ಆಕೆ ಹನುಮಾನ್ ಚಾಲೀಸ್ ಜಪಿಸುವುದನ್ನು ನಿಲ್ಲಿಸಿರಲೇ ಇಲ್ಲ.

ಮೂರು ಗಂಟೆಗಳ ಕಾಲ ನಡೆದ ಆಪರೇಷನ್ನ ಉದ್ದಕ್ಕೂ ಈಕೆ ಎಚ್ಚರವಾಗಿಯೇ ಇದ್ದಳು. ಅಷ್ಟೇ ಅಲ್ಲದೆ ಸತತ ಹನುಮಾನ್ ಚಾಲೀಸ್ ಜಪಿಸಿಕೊಂಡೇ ಇದ್ದಳು. ಶಸ್ತ್ರಚಿಕಿತ್ಸೆಯ ನಿರ್ಣಾಯಕ ಭಾಗದಲ್ಲಿಯೂ ಎಚ್ಚರವಾಗಿದ್ದರು ಎಂದು ನರಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರ ತಂಡದ ಭಾಗವಾಗಿದ್ದ ಡಾ.ದೀಪಕ್ ಗುಪ್ತಾ ಹೇಳಿದ್ದಾರೆ.
ಯುವತಿಗೆ ಸಾಮಾನ್ಯ ಅರಿವಳಿಕೆ ನೀಡಲಾಗಿತ್ತು. ಶಿಕ್ಷಕಿಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದ ಯುವತಿ ಸದ್ಯ ವೈದ್ಯರ ನಿಗಾದಲ್ಲಿದ್ದು ಶೀಘ್ರ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದಿದ್ದಾರೆ ವೈದ್ಯರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ