ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಜೆಡಿಎಸ್ ಜಿಲ್ಲಾ ಪಂಚಾಯತ ಸದಸ್ಯರು ಅಧಿಕಾರದಾಸೆಗೆ ಗೈರು ಹಾಜರಾಗುವ ಮೂಲಕ ಕೋರಂ ಕೊರತೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಚ್.ಡಿ.ರೇವಣ್ಣ, ಜೆಡಿಎಸ್ ಅಧಿಕಾರಕ್ಕಾಗಿ ಹಾತೊರೆಯುತ್ತಿಲ್ಲ. ಈ ಎಲ್ಲ ಆವಾಂತರಕ್ಕೂ ಕಾಂಗ್ರೆಸ್ ನೇರ ಹೊಣೆ ಎಂದು ಆರೋಪಿಸಿದ್ದಾರೆ.