ಮಹಾನಗರ ಪಾಲಿಕೆಯಾಗುತ್ತ ಹಾಸನ ಹೆಜ್ಜೆ

ಭಾನುವಾರ, 7 ಅಕ್ಟೋಬರ್ 2018 (16:44 IST)
ಇಷ್ಟು ದಿನ ನಗರಸಭೆಯಾಗಿದ್ದ ಹಾಸನ ಇನ್ಮುಂದೆ ಮಹಾನಗರ ಪಾಲಿಕೆಯಾಗಲು ಸಿದ್ಧತೆ ನಡೆಯುತ್ತಿದೆ.  
ನಗರಸಭೆಯಿಂದ ಮಹಾನಗರ ಪಾಲಿಕೆಗೆ ಮುಂಬಡ್ತಿಯನ್ನು ಹಾಸನ ನಗರ ಸಭೆ ಪಡೆದುಕೊಳ್ಳಲಿದೆ.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವರದಿ ಸಲ್ಲಿಕೆಗೆ  ನಗರಸಭೆ ಆಯುಕ್ತರು ಮುಂದಾಗಿದ್ದಾರೆ.
1984 ರಲ್ಲಿ  ಪುರಸಭೆಯಿಂದ ನಗರಸಭೆಗೆ ಮುಂಬಡ್ತಿ ಪಡೆದಿದ್ದ ಹಾಸನ ನಗರ ಈಗ 1.77 ಲಕ್ಷ ಜನ ಸಂಖ್ಯೆಯನ್ನು ಹೊಂದಿದೆ.
ಮಹಾನಗರ ಪಾಲಿಕೆಯಾಗಿ ಸೇರ್ಪಡೆಯಾಗಲು ಕನಿಷ್ಟ 3 ಲಕ್ಷ ಜನ ಸಂಖ್ಯೆ ಅಗತ್ಯವಾಗಿದೆ. ಸಚಿವ ಹೆಚ್.ಡಿ. ರೇವಣ್ಣ ಸೂಚನೆ ಮೇರೆಗೆ ಪ್ರದೇಶದ ನಕಾಶೆಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.

ಸುತ್ತಮುತ್ತಲ 11 ಗ್ರಾಮ ಪಂಚಾಯಿತಿಗಳ ವಿಲೀನದೊಂದಿಗೆ 3 ಲಕ್ಷ ಜನ ಸಂಖ್ಯೆ ದಾಖಲೆ ಸಿದ್ಧಗೊಂಡಿದೆ. ಇನ್ನಷ್ಟೇ  ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ