ಹಾಸನ ಟ್ರಕ್ ದುರಂತದ ಇನ್ನೊಂದು ವಿಡಿಯೋ ಇಲ್ಲಿದೆ
ಹಾಸನದ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ. ಗಣೇಶ ಮೆರವಣಿಗೆ ಮೇಲೆ ಟ್ರಕ್ ಹರಿದು 9 ಜನ ಸಾವನ್ನಪ್ಪಿದ್ದು ಹಲವರಿಗೆ ಗಾಯಗಳಾಗಿವೆ. ಡಿಜೆ ಹಾಡಿಗೆ ಕುಣಿಯುತ್ತಿದ್ದ ಜನಕ್ಕೆ ಏನಾಯಿತು ಎಂದು ಅರಿವಾಗುವಷ್ಟರಲ್ಲಿ ಟ್ರಕ್ ಹರಿದು ಹೋಗಿಯಾಗಿತ್ತು.
ರಸ್ತೆಯ ಒಂದು ಬದಿಯಲ್ಲಿ ಗಣೇಶ ಮೆರವಣಿಗೆ ಸಾಗುತ್ತಿದ್ದರೆ ಇನ್ನೊಂದು ಬದಿಯಿಂದ ಟ್ರಕ್ ಮೊದಲು ಎದುರಿನಿಂದ ಬರುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆಯುತ್ತದೆ. ಈ ರಭಸಕ್ಕೆ ಬೈಕ್ ಸವಾರ ನೆಲಕ್ಕುರುಳುತ್ತಾನೆ. ಅಲ್ಲಿಂದಲೂ ಮುನ್ನುಗ್ಗಿ ಮುಂದೆ ಇದ್ದ ಬ್ಯಾರಿಕ್ಯಾಡ್ ಮುರಿದು ಟ್ರಕ್ ರಸ್ತೆಯ ಇನ್ನೊಂದು ಬದಿಗೆ ನುಗ್ಗುತ್ತದೆ.
ಇಲ್ಲಿ ಗಣೇಶನ ಮೆರವಣಿಗೆಯ ಜೊತೆ ಸಾಗುತ್ತಿದ್ದ ಜನ ಸಾಕಷ್ಟು ಸಂಖ್ಯೆಯಲ್ಲಿದ್ದರು. ಅವರ ಮೇಲೆ ಟ್ರಕ್ ಹರಿದು ಹೋಗುತ್ತದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.