ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಈಗ ಸ್ಯಾಂಡಲ್ ವುಡ್ ಕ್ಯಾಪ್ಟನ್

ಶುಕ್ರವಾರ, 24 ಜುಲೈ 2020 (17:51 IST)
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರು ಸ್ಯಾಂಡಲ್ ವುಡ್ ನ ಸಾರಥ್ಯವಹಿಸಿಕೊಂಡಿದ್ದಾರೆ.

ದಿ.ಅಂಬರೀಶ್ ನಿಧನಾನಂತರ ಕನ್ನಡ ಚಿತ್ರರಂಗವು ಸೂಕ್ತ ನಾಯಕನಿಲ್ಲದೇ ಸೊರಗಿತ್ತು. ಆ ಕೊರಗನ್ನು ಶಿವರಾಜ್ ಕುಮಾರ್ ತುಂಬಿದ್ದು, ಇನ್ಮುಂದೆ ಸ್ಯಾಂಡಲ್ ವುಡ್ ನ ಎಲ್ಲಾ ಸಮಸ್ಯೆಗಳಿಗೆ ಶಿವರಾಜ್ ಕುಮಾರ್ ಸ್ಪಂದನೆ ಮಾಡಲಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘದ ಸದಸ್ಯರು ಹಾಗೂ ಚಿತ್ರರಂಗದ ಪ್ರಮುಖರು ಸೇರಿದ್ದ ಸಭೆಯಲ್ಲಿ ಶಿವರಾಜ್ ಕುಮಾರ್ ರನ್ನು ಸ್ಯಾಂಡಲ್ ವುಡ್ ನಾಯಕರಾಗಿ ಆಯ್ಕೆ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ