ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ತಯಾರಾಗ್ತಿದ್ದಾರೆ ಇಬ್ಬರು ಫ್ಯೂಚರ್ ಹೀರೋಸ್!
ಶುಕ್ರವಾರ, 24 ಜುಲೈ 2020 (09:29 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಕುಟುಂಬ ಸಮೇತರಾಗಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರ ಜತೆಗೆ ಉಪೇಂದ್ರ ಮನೆಯಲ್ಲಿರುವ ಇಬ್ಬರು ಫ್ಯೂಚರ್ ಸ್ಟಾರ್ ಗಳು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕ ಉಪೇಂದ್ರ ಜತೆಗೆ ಪುತ್ರ ಆಯುಷ್ ಉಪೇಂದ್ರ, ಉಪೇಂದ್ರ ಸಹೋದರನ ಪುತ್ರ ನಿರಂಜನ್ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನಿರಂಜನ್ ಹಾಗೂ ಆಯುಷ್ ಈಗ ಯಾವ ಯುವ ನಟರಿಗೂ ಕಡಿಮೆಯಿಲ್ಲದಂತೇ ತಯಾರಾಗುತ್ತಿದ್ದಾರೆ. ಇಬ್ಬರೂ ವರ್ಕೌಟ್ ಮಾಡಿ ದೇಹ ಹುರಿಗೊಳಿಸುತ್ತಿದ್ದು, ಮುಂದೊಂದು ದಿನ ಉಪೇಂದ್ರ ಕುಟುಂಬದ ಈ ಎರಡು ಕುಡಿಗಳು ಸ್ಯಾಂಡಲ್ ವುಡ್ ಗೆ ಕಾಲಿಡುವುದರಲ್ಲಿ ಅನುಮಾನವಿಲ್ಲ. ಉಪೇಂದ್ರ ಪುತ್ರಿ ಐಶ್ವರ್ಯಾ ಈಗಾಗಲೇ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ ಆಯುಷ್ ಇದುವರೆಗೆ ಪಾತ್ರ ಮಾಡಿಲ್ಲ. ಆದರೆ ಲುಕ್, ಬಾಡಿ ಬಿಲ್ಡಿಂಗ್ ನಲ್ಲಿ ಅಪ್ಪನನ್ನೂ ಮೀರಿಸುವ ಹಾಗೆ ಬೆಳೆಯುತ್ತಿರುವ ಆಯುಷ್ ಮುಂದೊಂದು ಚಿತ್ರರಂಗಕ್ಕೆ ಕಾಲಿಡುವ ಎಲ್ಲಾ ಲಕ್ಷಣಗಳಿವೆ.