25 ವರ್ಷ ರಾಜ್ಯ ಆಳಿದ ಲಿಂಗಾಯತರ ಕೊಡುಗೆ ಏನೆಂಬುದು ಗೊತ್ತು ಎಂದ ಹೆಚ್.ಡಿ.ದೇವೇಗೌಡರು

ಭಾನುವಾರ, 15 ಜುಲೈ 2018 (16:40 IST)
ಲಿಂಗಾಯತರು 25 ವರ್ಷಗಳ ಕಾಲ  ರಾಜ್ಯವನ್ನು ಆಳ್ವಿಕೆ ಮಾಡಿದ್ದು, ಅವರು ಏನು ಮಾಡಿದ್ದಾರೆ? ಒಕ್ಕಲಿಗರು ಏನು ಮಾಡಿದ್ದಾರೆ ಎಂಬುದು ಗೊತ್ತು. ಲಿಂಗಾಯತ ನಾಯಕರಾದ ವೀರೇಂದ್ರ ಪಾಟೀಲ್, ನಿಜಲಿಂಗಪ್ಪ, ಯಡಿಯೂರಪ್ಪ ಹಾಗೂ  ಜಗದೀಶ್ ಶೆಟ್ಟರ್ ಸೇರಿದಂತೆ ಯಾವ ಯಾವ ಸಿಎಂಗಳು ಏನೇನು ಮಾಡಿದ್ದಾರೆ ತಾವು ಏನು ಮಾಡಿದ್ದೇವೆ ಎಂಬುದು ಎಲ್ಲರಿಗೂ ತಿಳಿದ ವಿಷಯ.‌ 1965  ರಲ್ಲಿ ಭಾಷಾವಾರು ಪಾಂತ ವಿಂಗಡಣೆ ನಂತರ  ಉತ್ತರ ಕರ್ನಾಟಕಕ್ಕೆ ಬಿಡುಗಡೆಯಾದ ಅನುದಾನ ಯಾವುದಕ್ಕೆ ವಿನಿಯೋಗ ಮಾಡಲಾಗಿದೆ ಎಂಬ ಬಗ್ಗೆ ಮುಂದಿನ ಅಧಿವೇಶನದಲ್ಲಿ ಶ್ವೇತಪತ್ರ ಮಂಡಿಸಲು ಸಿಎಂ ಕುಮಾರಸ್ವಾಮಿ ಅವರಿಗೆ ಹೇಳುತ್ತೇನೆ ಎಂದ ಹೆಚ್.ಡಿ.ದೇವೇಗೌಡ ಅವರು, ಎಚ್ಕೆ ಪಾಟೀಲ್ ಗ್ರಾಮೀಣ ಅಭಿವೃದ್ಧಿಗೆ ಏನು ಮಾಡಿದ್ದಾರೆ? ಅವರು ಗದಗ ಜಿಲ್ಲೆಗೆ ಎಷ್ಡು ಅನುದಾನ ನೀಡಿದ್ದಾರೆ? ಎಂಬುದನ್ನು ಸ್ಪಷ್ಪಪಡಿಸಲಿ ಎಂದರು.

ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರು  ಇಂದು ಲಿಂಗಾಯತರ ಮತ್ತು ಉತ್ತರ ಕರ್ನಾಟಕ ಅಭಿವೃದ್ಧಿ  ವಿರೋಧಿ ಎನ್ನುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ನಾನು ಯಾವುದೇ ಜಾತಿ ಪ್ರದೇಶದ ವಿರೋಧಿ ಅಲ್ಲಾ.‌ ನನ್ನನ್ನು  ಲಿಂಗಾಯತರ ಮತ್ತು ಉತ್ತರ ಕರ್ನಾಟಕ ಅಭಿವೃದ್ಧಿ ವಿರೋಧಿ ಅಂತಾ ಬಿಂಬಿಸಲಾಗುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ