ಸಿಡಿದ ಮೊಮ್ಮಗನಿಗೆ ಬುದ್ಧಿ ಹೇಳಿದ ದೇವೇಗೌಡರು
ಮುಂಬರುವ ಚುನಾವಣೆಯಲ್ಲಿ ಎಚ್ ಡಿ ರೇವಣ್ಣ ಮತ್ತು ಕುಮಾರಸ್ವಾಮಿ ಮಾತ್ರ ಗೌಡರ ಕುಟುಂಬದಿಂದ ಸ್ಪರ್ಧಿಸುವುದಾಗಿ ದೇವೇಗೌಡರು ಹೇಳಿದ್ದರು. ಇದೀಗ ಹುಣಸೂರಿನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಜ್ವಲ್ ಸಾರ್ವಜನಿಕವಾಗಿ ತಮ್ಮ ನಿರಾಸೆಯನ್ನು ಪಕ್ಷ ವಿರೋಧಿ ಹೇಳಿಕೆಗಳ ಮೂಲಕ ಹೊರಹಾಕುತ್ತಿದ್ದಾರೆ ಎಂದು ಇತರ ನಾಯಕರು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ದೊಡ್ಡ ಗೌಡರು ಮೊಮ್ಮಗನಿಗೆ ಈ ರೀತಿ ವರ್ತನೆ ಸರಿಯಲ್ಲ ಎಂದು ಮತ್ತೊಮ್ಮೆ ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ.