ಬೆಂಗಳೂರು: ಮಹಿಳೆಯರ ಲೈಂಗಿಕ ದೌರ್ಜನ್ಯ ಮತ್ತು ಅಪಹರಣ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪ್ರಜ್ವಲ್ ರೇವಣ್ಣ ಮತ್ತು ಭವಾನಿ ರೇವಣ್ಣ ವಿರುದ್ಧ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್ಐಟಿ ತನಿಖೆಗೆ ಹಾಜರಾಗದೇ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇತ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಎರಡೆರಡು ಬಾರಿ ಎಸ್ಐಟಿ ನೋಟಿಸ್ ನೀಡಿದರೂ ಭವಾನಿ ರೇವಣ್ಣ ಕೂಡಾ ಆರೋಗ್ಯದ ನೆಪ ಹೇಳಿ ತಪ್ಪಿಸಿಕೊಂಡಿದ್ದಾರೆ.
ರೇವಣ್ಣ ಜೈಲಿಗೆ ಹೋದರೂ ಪ್ರಜ್ವಲ್ ವಿದೇಶದಿಂದ ಬಂದಿಲ್ಲ. ಈ ಪ್ರಕರಣ ದೇವೇಗೌಡರು ಇಷ್ಟು ದಿನ ಕಷ್ಟಪಟ್ಟು ಗಳಿಸಿದ್ದ ಗೌರವ, ಪ್ರತಿಷ್ಠೆಯನ್ನು ಮಣ್ಣು ಪಾಲು ಮಾಡಿದೆ. ಹೀಗಾಗಿ ದೇವೇಗೌಡರು ಸೊಸೆ ಮತ್ತು ಮೊಮ್ಮಗನ ಮೇಲೆ ಗರಂ ಆಗಿದ್ದಾರೆ. ಇದೇ ಕಾರಣಕ್ಕೆ ರೇವಣ್ಣ ಮೂಲಕ ಎಚ್ಚರಿಕೆ ನೀಡಿದ್ದಾರಂತೆ.
ಭವಾನಿ ರೇವಣ್ಣ ಸದ್ಯಕ್ಕೆ ಕಾಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ರೇವಣ್ಣ ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲೂ ಜೊತೆಗಿರಲಿಲ್ಲ. ಕಷ್ಟದ ಸಂದರ್ಭದಲ್ಲೂ ಮಗ, ಸೊಸೆ ಬಂದಿಲ್ಲ ಎನ್ನುವುದು ದೇವೇಗೌಡರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಜ್ವಲ್ ಪ್ರಕರಣದಿಂದ ರೇವಣ್ಣ ಈಗಾಗಲೇ ಜೈಲು ವಾಸ ಅನುಭವಿಸಿದ್ದಾರೆ.