ಹಾಸನದಲ್ಲಿ ದುರಂತ ಎಂದಾಕ್ಷಣ ನಡೆಯಲಾಗದಿದ್ದರೂ ಓಡೋಡಿ ಬಂದ ದೇವೇಗೌಡ
ಹಾಸನದಲ್ಲಿ ಮೊನ್ನೆ ರಾತ್ರಿ ಟ್ರಕ್ ಹರಿದು ಗಣೇಶ ಮೆರವಣಿಗೆ ಸಾಗುತ್ತಿದ್ದವರು ಸಾವನ್ನ್ಪಪಿದ್ದರು. ಘಟನೆ ಬಗ್ಗೆ ತಿಳಿಯುತ್ತಿದ್ದಂತೇ ನಿಖಿಲ್ ಕುಮಾರಸ್ವಾಮಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು.
ಇದೀಗ ಎಚ್ ಡಿ ದೇವೇಗೌಡರೂ ಸ್ಥಳಕ್ಕೆ ಆಗಮಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ದೇವೇಗೌಡರು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದು ಕಡಿಮೆ. ಅವರಿಗೆ ನಡೆದಾಡಲೂ ಕಷ್ಟವಾಗುತ್ತದೆ. ಆದರೆ ಹಾಸನದಲ್ಲಿ ದುರಂತ ಎಂದಾಕ್ಷಣ ಎಲ್ಲವನ್ನೂ ಮರೆತು ಬಂದಿದ್ದಾರೆ.
ಬಂದಿದ್ದಷ್ಟೇ ಅಲ್ಲ ಮೃತರ ಕುಟುಂಬಸ್ಥರಿಗೆ ಪಕ್ಷದ ಪರಿಹಾರ ನಿಧಿಯಿಂದ ತಲಾ 1 ಲಕ್ಷ ರೂ. ನೀಡಿದ್ದಾರೆ. ಅಲ್ಲದೆ ಗಂಭೀರ ಗಾಯಗೊಂಡವರಿಗೆ ತಲಾ 25 ಸಾವಿರ ರೂ., ಸಣ್ಣ ಗಾಯಗಳಾಗಿರುವವರಿಗೆ ತಲಾ 20 ಸಾವಿರ ರೂ. ತಾವೇ ಖುದ್ದಾಗಿ ಚೆಕ್ ನೀಡಿದ್ದಾರೆ. ಅಲ್ಲದೆ ಸರ್ಕಾರ 5 ಲಕ್ಷ ಅಲ್ಲ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.