ಬೆಂಗಳೂರು: ಚನ್ನಪಟ್ಟಣದಲ್ಲಿ ಈ ಬಾರಿ ಉಪಚುನಾವಣೆಯಲ್ಲಿ ಸೋತರೂ ಮಗ ನಿಖಿಲ್ ಕುಮಾರಸ್ವಾಮಿಗೆ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ದೊಡ್ಡ ಜವಾಬ್ಧಾರಿಯನ್ನೇ ನೀಡಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿಗೆ ಮಗ ಸೋತರೂ ಅವನು ಇನ್ನು ಮುಂದೆಯೂ ಪಕ್ಷದ ಜವಾಬ್ಧಾರಿಯಲ್ಲಿ ಮುಂದುವರಿಯಲಿದ್ದಾರೆ ಎಂದಿದ್ದಾರೆ. ನಿಖಿಲ್ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಲಿದ್ದಾರೆ ಎಂದಿದ್ದಾರೆ.
ಚನ್ನಪಟ್ಟಣದಲ್ಲಿ ಉಪಚುನಾವಣೆ ಗೆದ್ದಿದ್ದರೆ ನಿಖಿಲ್ ಗೆ ರಾಜ್ಯಾಧ್ಯಕ್ಷ ಪಟ್ಟ ಕೊಡಲು ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಸದ್ಯಕ್ಕೆ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಹಿನ್ನಡೆ ಅನುಭವಿಸಿದೆ. ಹೀಗಾಗಿ ಪಕ್ಷ ಸಂಘಟನೆ ಮಾಡಿ ಮರು ಜೀವ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.
ಹೀಗಾಗಿ ಈ ಜವಾಬ್ಧಾರಿಯನ್ನು ಮಗನಿಗೆ ವಹಿಸಿದ್ದಾರೆ. ಈ ಮೂಲಕ ಮತ್ತೆ ಜನರ ವಿಶ್ವಾಸ ಗಳಿಸಲು ಕುಮಾರಸ್ವಾಮಿ ಪ್ರಯತ್ನ ನಡೆಸಿದ್ದಾರೆ. ನಿಖಿಲ್ ಇದುವರೆಗೆ ಮೂರು ಚುನಾವಣೆ ಸ್ಪರ್ಧಿಸಿದ್ದು ಮೂರು ಬಾರಿಯೂ ಸೋತಿದ್ದಾರೆ. ಹೀಗಾಗಿ ಮಗನನ್ನು ರಾಜಕೀಯದಲ್ಲಿ ಕ್ಲಿಕ್ ಮಾಡಲು ಕುಮಾರಸ್ವಾಮಿ ಮತ್ತೊಂದು ಪ್ರಯತ್ನ ನಡೆಸಲಿದ್ದಾರೆ.