ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಮೊದಲ ಪ್ರತಿಕ್ರಿಯೆ ನೀಡಿದರು.
ಚುನಾವಣೆಯ ಫಲಿತಾಂಶ ಬಂದಾಗಿದೆ. ಈಗ ಏನು ಚರ್ಚೆ ಮಾಡಿದರೂ ಪ್ರಯೋಜನ ಇಲ್ಲ. ಫಲಿತಾಂಶ ಒಪ್ಪಿಕೊಳ್ಳಲೇಬೇಕು. ಏನೇ ಇದ್ರೂ ಆಮೇಲೇ ಮಾತಾಡ್ತೇನೆ ಎಂದು ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಬೇಸರ ವ್ಯಕ್ತಪಡಿಸಿದರು.
ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದ ಬಳಿಕ ಯಾವುದೇ ಕಾರ್ಯಕ್ರಮ ಹಾಕಿಕೊಳ್ಳದ ಕುಮಾರಸ್ವಾಮಿ, ಜೆ.ಪಿ ನಗರದ ನಿವಾಸದಲ್ಲಿಯೇ ಇದ್ದರು. ಪುತ್ರ ನಿಖಿಲ್ ಸಹ ಜೊತೆಗಿದ್ದರು.
ನಾಳೆ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆ ಸಚಿವ ಕುಮಾರಸ್ವಾಮಿ ಇಂದೇ ದೆಹಲಿಗೆ ತೆರಳುತ್ತಿದ್ದಾರೆ. ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ಇಂದು ಮಧ್ಯಾಹ್ನ 12.30ರ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಲಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಯೋಗೇಶ್ವರ್ 1,12,642 ಮತ ಪಡೆದರೆ, ಎನ್‌ಡಿಎ ಅಭ್ಯರ್ಥಿ 87,229 ಮತ ಪಡೆದು, 25,413 ಅಂತರದಿಂದ ಸೋತರು. ನಿಖಿಲ್ ಅವರಿಗೆ ಇದು ಹ್ಯಾಟ್ರಿಕ್ ಸೋಲಾಗಿದೆ.