ಅರುಣ್ ಜೇಟ್ಲಿ ಅಗಲಿಕೆಗೆ ಹೆಚ್ ಡಿ ಡಿ ಸಂತಾಪ

ಶನಿವಾರ, 24 ಆಗಸ್ಟ್ 2019 (16:17 IST)
ಕೇಂದ್ರದ ಮಾಜಿ ಸಚಿವರಾಗಿದ್ದ ಹಾಗೂ ಚಿಕಿತ್ಸೆ ಫಲಿಸದೇ ಅಗಲಿರೋ ಅರುಣ್ ಜೇಟ್ಲಿ  ಅಗಲಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಂತಾಪ ವ್ಯಕ್ತಪಡಿಸಿದ್ದಾರೆ.

ಜೇಟ್ಲಿ ಅವರ ಅಗಲಿಕೆಯ ವಿಷಯವು ದುಃಖ ತಂದಿದೆ. ಅವರು ಒಬ್ಬ ಹಿರಿಯ ನಾಯಕರಾಗಿದ್ದವರು. ಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ದೇವರು ಅವರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ಕೊಡಲಿ ಅಂತ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪಕ್ಷ ಸಂಘಟನೆಗೆ ಆದ್ಯತೆ: ಜೆಡಿಎಸ್ ಕಚೇರಿಯಲ್ಲಿ ನಾನಿರುವೆ. ರಾಜ್ಯದಲ್ಲಿ ಜೆಡಿಎಸ್ ಕಟ್ಟಲು ಶ್ರಮಿಸುತ್ತಿರುವುದಾಗಿ ತಿಳಿಸಿರೋ ಹೆಚ್.ಡಿ.ದೇವೇಗೌಡರು, ಉತ್ತಮವಾಗಿ ಕೆಲಸ ಕಾರ್ಯ ಮಾಡುತ್ತಿರೋ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳನ್ನು ಗುರುತು ಮಾಡುತ್ತಿರುವೆ. ಬಿಜೆಪಿಯವರು ಒಳ್ಳೆಯ ಕೆಲಸ ಮಾಡಿದರೆ ಸಂತಸ. ಇಲ್ಲದಿದ್ದರೆ ಜನತೆಯ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮುಂದುವರಿಯಲಿದೆ ಅಂತ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ