500 ಹುಡುಗಿಯರ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿಕೊಂಡ ವಿಕೃತ ಕಾಮುಕ

ಶನಿವಾರ, 24 ಆಗಸ್ಟ್ 2019 (15:41 IST)

ಕೆಲಸ ಕೊಡಿಸೋದಾಗಿ ಹಾಗೂ ಸುಳ್ಳು ಆಸೆ ಐದನೂರಕ್ಕೂ ಹೆಚ್ಚು ಯುವತಿಯರ ಬಟ್ಟೆ ಬಿಚ್ಚಿಸಿ ಫೋಟೋ, ವಿಡಿಯೋ ತೆಗೆದುಕೊಂಡಿದ್ದ ವಿಕೃತ ಕಾಮುಕನೊಬ್ಬನನ್ನು ಬಂಧನ ಮಾಡಲಾಗಿದೆ.

ಚೆನ್ನೈ ಮೂಲದ ಟೆಕ್ಕಿ ಪ್ರದೀಪ್ ನನ್ನು ಪೊಲೀಸರು ಬಂಧನ ಮಾಡಿದ್ದು, ಆತನಿಂದ ಮೋಸ ಹೋದ ಯುವತಿ ದೂರು ನೀಡಿದ್ದಾಳೆ.

ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರೋ ಪ್ರದೀಪ್, ತಾನೊಬ್ಬ ಹೆಚ್ ಆರ್ ಅಂತ ಬಿಲ್ಡಪ್ ಕೊಟ್ಟು ಸುಂದರವಾಗಿರೋ ಯುವತಿಯರನ್ನು ಸಂಪರ್ಕ ಮಾಡಿ ಗೆಳೆತನ ಮಾಡುತ್ತಿದ್ದನು.

ಇಂಟರವ್ಯೂ ಹೆಸರಲ್ಲಿ ಸುಂದರತೆ ತೋರಿಸಿ ಅಂತ ಯುವತಿಯರ ದೇಹದ ಮೇಲಿನ ಬಟ್ಟೆ ಬಿಚ್ಚೋವಾಗಿ ವಾಟ್ಸಪ್ ವಿಡಿಯೋ ಕಾಲ್ ನಲ್ಲಿನ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ.

ಯುವತಿಯರಿಂದ ಹಣವನ್ನು ಈತ ಬ್ಲಾಕಮೇಲ್ ಮಾಡಿ ಪೀಕುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ