ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವರ್ಗಾವಣೆ ಆರೋಪ ಮಾಡಿದ್ದು, ವಿಧಾನಸೌಧಕ್ಕೆ ಪೆನ್‌ಡ್ರೈವ್ ಸಮೇತ ಆಗಮಿಸಿದ್ರು. ಪೆನ್‌ಡ್ರೈವ್ ಕುರಿತು ಪ್ರತಿಕ್ರಿಯೆ ನೀಡಿದ ಅವರು,ವರ್ಗಾವಣೆ ದಂಧೆಯ ಪೆನ್‌ಡ್ರೈವ್ ಇದು ಎಂದ್ರು.. ನಾನು ವರ್ಗಾವಣೆ ದಂಧೆಯ ಆರೋಪ ಮಾಡಿದ್ದೇನೆ.ನಿಮ್ಮದೇ ಸರ್ಕಾರ ಇದೆ ತನಿಖೆ ಮಾಡಿಸಿ ಎಂದು ಸವಾಲು ಹಾಕಿದ್ರು. ಇಂಧನ ಇಲಾಖೆಯಲ್ಲಿ 10 ಕೋಟಿಗೆ ವರ್ಗಾವಣೆ ಆಗಿದೆ. ಆ ಅಧಿಕಾರಿ 1 ದಿನಕ್ಕೆ 50 ಲಕ್ಷ ಕಮಿಷನ್ ಹೊಡೆಯುತ್ತಾನೆ ಎಂದು ಆರೋಪ ಮಾಡಿದ್ರು.. ನಗದು ಅಭಿವೃದ್ಧಿ ಇಲಾಖೆ ಈ ಸರ್ಕಾರದಲ್ಲಿದೆ.. ನಗರಾಭಿವೃದ್ಧಿ ಅಲ್ಲ, ನಗದು ಅಭಿವೃದ್ಧಿ ಇಲಾಖೆ ಎಂದು ಲೇವಡಿ ಮಾಡಿದ್ರು.. ಇನ್ನು 1999ರಿಂದ ಹೇಗೆ ಅಭಿವೃದ್ಧಿ ಮಾಡಿದ್ದೀರಿ ಎಂದು ಗೊತ್ತಿದೆ. ಎಷ್ಟು ಪ್ರಕರಣದಲ್ಲಿ ತಾರ್ಕಿಕ ಅಂತ್ಯ ಕಂಡಿದ್ದೇವೆ.? ಎಂದು ಸರ್ಕಾರಕ್ಕೆ H.D.ಕುಮಾರಸ್ವಾಮಿ ಪ್ರಶ್ನಿಸಿದ್ರು.