ದಾಖಲೆ ಸಮೇತ ಕೊಡಲಿ, ತನಿಖೆ ಮಾಡಿಸ್ತೇವೆ
ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಪೆನ್ಡ್ರೈವ್ ಇದ್ರೆ ಸ್ಪೀಕರ್ಗೆ ಕೊಡಲಿ.. ಅದೇನ್ ದಾಖಲೆ ಇದೆಯೋ ಮೊದಲು ಕೊಡಲಿ.ಇಂಧನ ಇಲಾಖೆಯಲ್ಲಿ ಯಾವ ಅಕ್ರಮ ನಡೆದಿದೆ ಎನ್ನುವುದನ್ನು ದಾಖಲೆ ಸಮೇತ ಕೊಡಲಿ ಎಂದರು. ಸುಮ್ಮನೆ ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಮಾಡಬಾರದು.. ಏನೇ ದಾಖಲೆ ಇದ್ರೂ ಕೊಡಲಿ, ತನಿಖೆ ಮಾಡಿಸ್ತೇವೆ ಎಂದರು.